November 9, 2024

Bhavana Tv

Its Your Channel

ಅಕ್ರಮವಾಗಿ ಮಾಂಸ ಮಾರಾಟ, ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು..೪೦೦ರೂಗಳ ಮಾಂಸವನ್ನು ಕೆಜಿ ಗೆ ೬೦೦ರೂಗಳಿಗೆ ಮಾರಾಟ ಮಾಡುತ್ತಿದ್ದ ವ್ಯಾಪಾರಿ.

ಕೃಷ್ಣರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿ ಕರೋನಾ ಹಿನ್ನೆಲೆಯಲ್ಲಿ ಮಾಂಸದAಗಡಿಗಳು ಹಾಗೂ ಕೋಳಿ ಅಂಗಡಿಗಳನ್ನು ಬಂದ್ ಮಾಡಲು ತಾಲೂಕು ಆಡಳಿತವು ಆದೇಶ ಹೊರಡಿಸಿದ್ದರೂ ಪಟ್ಟಣದ ಹೊರವಲಯದ ಮೈಸೂರು ರಸ್ತೆಯಲ್ಲಿರುವ ಅಮೀನ್ ಮಟನ್ ಸ್ಟಾಲ್ ನಲ್ಲಿ ನಾಲ್ಕೈದು ಕುರಿಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂಧಿಗಳು ದಾಳಿ ನಡೆಸಿ ಅಂಗಡಿಯ ಮಾಲೀಕ ಸೈಯ್ಯದ್ ಸಾಧಿಕ್ ವಿರುದ್ಧ ದೂರು ದಾಖಲಿಸಿದ್ದಾರೆ …..

ಮಾಂಸದAಗಡಿಯ ಪಕ್ಕದಲ್ಲಿರುವ ಪಂಪ್ ಹೌಸ್ ನಲ್ಲಿ ಬಚ್ಚಿಟ್ಟಿದ್ದ ಮಾಂಸ, ಚರ್ಮ ಮತ್ತು ಕುರಿ ಆಡುಗಳ ತಲೆಗಳನ್ನು ಪತ್ತೆಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ, ಕೊರೋನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ತಾಲೂಕು ಆಡಳಿತವು ಸಕಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ಮಾಂಸದAಗಡಿಗಳು, ಕೋಳಿ ಅಂಗಡಿಗಳು ಸೇರಿದಂತೆ ರಸ್ತೆ ಬದಿಯ ತಳ್ಳು ಗಾಡಿಗಳಲ್ಲಿ ಮಾರುತ್ತಿದ್ದ ಪಾನಿಪುರಿ, ಗೋಬಿಮಂಚೂರಿ ಹಾಗೂ ಕ್ಯಾಂಟೀನ್ ಗಳನ್ನು ಬಂದ್ ಮಾಡಿಸಲಾಗಿದೆ. ಪಟ್ಟಣದ ನಿವಾಸಿಗಳು ಹಾಗೂ ಸಾರ್ವಜನಿಕರು ಸ್ವಚ್ಛತೆಗೆ ಒತ್ತು ನೀಡಬೇಕು..ಮುಂಜಾಗರೂಕತಾ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಕರೋನಾ ಸೇರಿದಂತೆ ಹೆಚ್೧ಎನ್೧ ನಂತಹ ವೈರಾಣುಗಳ ಮೂಲಕ ಹರಡುವ ರೋಗರುಜಿನಗಳನ್ನು ತಡೆಗಟ್ಟಬೇಕು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ಮನವಿ ಮಾಡಿದರು….

error: