ಮಂಡ್ಯ: ಪ್ರಸ್ತುತ ದಿನಗಳಲ್ಲಿ ಭ್ರಷ್ಟಚಾರ, ಅತ್ಯಾಚಾರ, ಅನಾಚರ ಹೆಚ್ಚಾಗುತ್ತಿವೆ, ಕಾನೂನು ವ್ಯವಸ್ಥೆ ಕಠಿಣವಾಗಿದ್ದರೂ ಅಪರಾಧ ಪ್ರಕರಣ ನಿಯಂತ್ರಣವಾಗುತ್ತಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿನಾಗರಾಜು ಗಂಗಾವತಿ ಕಳವಳವ್ಯಕ್ತ ಪಡಿಸಿದರು.
ನಗರದ ಹೊರವಲಯದಲ್ಲಿರುವ ಮಾಂಡವ್ಯ ಪ್ರಸ್ಟ್ ಗ್ರೇಡ್ ಕಾಲೇಜ್ನ ಸಭಾಂಗಣದಲ್ಲಿ ಶನಿವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ,ರಾಷ್ಟ್ರೀಯ ಬಸವದಳ, ನಿವೃತ್ತ ಶಿಕ್ಷಕ ಕೆ.ಮಾಯಿಗ ಶೆಟ್ಟಿ ಸೇವಾ ಸಮಿತಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ಹೆಣ್ಣು ಮಕ್ಕಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾವಂತರಿoದಲೇ ಭ್ರಷ್ಟಚಾರ, ಅತ್ಯಾಚಾರ, ಅನಾಚರ ಹೆಚ್ಚಾಗುತ್ತಿವೆ, ಕಾನೂನು ಅರಿವು ಹೆಚ್ಚಿಸಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ, ಆಗಮಾತ್ರ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರುವುದು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಹಕ್ಕು ಮತ್ತು ಕರ್ತವ್ಯ ಹಾಗೂ ಸೌಲಭ್ಯಗಳನ್ನು ನೀಡಿದೆ, ಸಂವಿಧಾನವೇ ಸರ್ವಧರ್ಮ ಗ್ರಂಥವಾಗಿದೆ, ಸಂವಿಧಾನ ಎಂದರೆ ಕಾನೂನು, ಕಾನೂನುಗಳನ್ನು ಪಾಲನೆ ಮಾಡುವುದೇ ನಮ್ಮೆಲ್ಲರ ಸುಜ್ಞಾನ ಎಂದು ಎಂದು ತಿಳಿಸಿದರು.
ಇತ್ತಿಚಿನ ದಿನಗಳಲ್ಲಿ ಕಾನೂನಿನ ಭಯ ಜನರಿಗಿಲ್ಲದಾಗಿದೆ, ಕಾರಣ ಭ್ರಷ್ಟಚಾರದ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳು ಕಲುಸಿತಗೊಳ್ಳುತ್ತಿದೆ, ಯುವಸಮುದಾಯ ಮಾತ್ರ ಇಂತಹ ಅನ್ಯಾಯಗಳನ್ನು ಸರಿಪಡಿಸಲು ಸಾಧ್ಯವಿದೆ, ಶಿಕ್ಷೆಯಿಂದ ನಿಯಂತ್ರಿಸಲು ಸುಲಭ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನು ಪತ್ರಕರ್ತ ಹಾಗೂ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ಲೋಕೇಶ್ ಎಂ ಮಾತನಾಡಿ ಮಂಡ್ಯ ಜಿಲ್ಲಾದ್ಯಂತ ಪ್ರತಿಭಾ ಪುರಸ್ಕಾರ ಹಾಗೂ ಕಾನೂನು ಹಾಗೂ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿದ್ದು ನಡೆಸಿಕೊಂಡು ಬಂದಿದ್ದು ಕಳೆದ ಕೋವಿಡ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರತಿಭಾ ಪುರಸ್ಕಾರ ನಡೆಸಲು ಸಾಧ್ಯವಾಗಲಿಲ್ಲ ಆದ್ದರಿಂದ ಇದು ಮೊದಲನೇ ಕಾರ್ಯಕ್ರಮ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು ನಂತರ ಪಾಲ್ಗೊಂಡಿದ್ದ ಎಸ್. ಬಿ. ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ಅವರು, ಆಧುನಿಕ ಜಗತ್ತಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ಕ್ರೆöÊಂಗಳು ಹೆಚ್ಚಾಗುತ್ತಿವೆ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು, ಅಶ್ಲೀಲ, ಅವೈಚ್ಯ ಶಬ್ಧ, ಸಂದೇಶ ಬಳಕೆಗೆ ಬಳಸಿಕೊಳ್ಳುತ್ತಿರುವುದು ಆತಂಕ ತರುತ್ತಿದೆ ಎಂದು ಹೇಳಿದರು.
ಮೊಬೈಲ್, ವಾಟ್ಸ್ಆಪ್, ಮೆಸೇಜ್ಗಳ ಮೂಲಕ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನೇ ಬದಲಿಸುವ ಅಪರಾಧೀಕರಣ ಹೆಚ್ಚುತ್ತಿದೆ, ವಿದ್ಯಾರ್ಥಿಗಳನ್ನು ಎದುರಿಸುವ, ಬೆದರಿಕೆ ಹಾಕುವ ಹಂತಕ್ಕೆ ಬಂದು ನಿಂತ್ತಿವೆ ಎಂದು ಕಳವಳವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆ ವೈದ್ಯರಾದ ಡಾ.ಮಂಜು ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಎಂ. ಲೋಕೇಶ್, ರಾಷ್ಟ್ರೀಯ ಬಸವದಳದ ವಕೀಲ ಎಂ. ಗುರುಪ್ರಸಾದ್, ಪ್ರಾಂಶುಪಾಲ ಬಾವಾನಿಶಂಕರ್, ÀiÁಂಡವ್ಯ ಶಿಕ್ಷಣ ವಿದ್ಯಾಲಯ ಪ್ರಾಂಶುಪಾಲೆ ಡಾ ಸುಮಾರಾಣಿ ಮತ್ತು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು
ವರದಿ: ಲೋಕೇಶ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ