March 12, 2025

Bhavana Tv

Its Your Channel

೨೦ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಶಶಿಧರ ನಾಯ್ಕರಿಗೆ ಸ್ವಾಗತ

ಭಟ್ಕಳ: ಕಳೆದ ೨೦ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಮರಳಿದ ಸೈನಿಕನನ್ನು ತಾಲ್ಲೂಕಿನ ಮುಂಡಳ್ಳಿಯ ಗ್ರಾಮದ ಜನರು ಹಾಗೂ ಕುಟುಂಬಸ್ಥರು ಯೋಧನಿಗೆ ಅದ್ದೂರಿ ಸ್ವಾಗತ ಮಾಡಿದರು. ಜುಲೈ ೩೧ರಂದು ಸೇವಾ ನಿವೃತ್ತಿಯಾಗಿ ಗ್ರಾಮಕ್ಕೆ
ಆಗಮಿಸಿದ ಯೋಧ ಶಶಿಧರ ರಾಮಚಂದ್ರ ನಾಯ್ಕ ಅವರಿಗೆ ಭಟ್ಕಳ ತಾಲೂಕಿನ ಮುಂಡಳ್ಳಿಯ ಗ್ರಾಮದ ಜನರು ಹಾಗೂ ಕುಟುಂಬಸ್ಥರು ಯೋಧನಿಗೆ ಅದ್ದೂರಿ ಸ್ವಾಗತ ಮಾಡಿದರು. ಇವರು
ಕೇಂದ್ರ ಮೀಸಲು ಪೋಲಿಸ್ ಪಡೆಗೆ ತಮ್ಮ ಅಮೂಲ್ಯವಾದ ೨೦ ವರ್ಷಗಳನ್ನು ಮೀಸಲಾಗಿಟ್ಟು , ಸುಧೀರ್ಘ ಯಶಸ್ವಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ಸೇನೆಗೆ ಸೇರುವಾಗ ತನ್ನ ಮೊದಲ ಸೇವೆಯನ್ನು ೦೫ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ, ೪ ವರ್ಷಗಳನ್ನು ಅಸ್ಸಾಂ ರಾಜ್ಯದಲ್ಲಿ, ೪ ವರ್ಷ ಛತ್ತೀಸ್‌ಗಡ ರಾಜ್ಯದಲ್ಲಿ, ಕೊಯಮುತ್ತುರಿನಲ್ಲಿ ಸುಮಾರು ೫ ವರ್ಷ, ಹಾಗೆ ಕೊನೆಯದಾಗಿ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ೨ ವರ್ಷಗಳ ಸೇವೆ ಮುಗಿಸಿ ನಿವೃತ್ತಿಯಾಗಿದಾರೆ.
ನಂತರ ಮಾತನಾಡಿದ ಅವರು ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು.ನAತರ ಯೋಧನ ಮನೆಯ ಮುಂದೆ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಣ್ಣಪ್ಪ ನಾಯ್ಕ,ನಾಗೇಂದ್ರ ನಾಯ್ಕ,ದಿನೇಶ್ ನಾಯ್ಕ,ರಾಜೇಶ್ ನಾಯ್ಕ,ಮಾದೇವ ನಾಯ್ಕ, ಗೋಪಾಲ ನಾಯ್ಕ,ಮಾದೇವ ಮೊಗೇರ್,ಜಗದೀಶ್ ಆಚಾರ್ಯ, ಈಶ್ವರ ನಾಯ್ಕ,ಯುಗಾದಿ ನಾಯ್ಕ,ವಸಂತ ನಾಯ್ಕ,ಹಾಗೂ ಮುಂತಾದವರು ಉಪಸ್ಥಿತಿ ಇದ್ದರು.

ಭಟ್ಕಳ ಪ್ರಸಿದ್ಧ ಮಾರಿ ಜಾತ್ರೆಯ ನೇರಪ್ರಸಾರ ಭಾವನಾ Youtube subscribe ಆಗಿ ವೀಕ್ಷಿಸಿ
error: