December 19, 2024

Bhavana Tv

Its Your Channel

ರೋಣ ತಾಲೂಕು ಆಸ್ಪತ್ರೆ ಆವರಣದಲ್ಲಿ ನಿರಂತರ ಅನ್ನದಾಸೋಹ ಕೇಂದ್ರ ಸ್ಥಾಪನೆ.

ಗದಗ ಜಿಲ್ಲೆ ರೋಣ ತಾಲೂಕಿನ ನಿರಂತರ ಅನ್ನದಾಸೋಹ ಕೇಂದ್ರವನ್ನು ರೋಣ ತಾಲೂಕು ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಯಿತು. ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ನಿರಂತರ ಅನ್ನದಾಸೋಹ ಕೇಂದ್ರವನ್ನು ರೋಣ ಡಾಕ್ಟರ್ ಭೀಮ್ ಸೇನ್ ಜೋಶಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಉದ್ಘಾಟಿಸಲಾಯಿತು. ಒಂದು ಸಿಹಿ ಮತ್ತು ಒಂದು ತರದ ಪಲ್ಲೆ. ಉಪ್ಪಿನಕಾಯಿ. ಅನ್ನ ಸಾಂಬಾರ್. ಕೊಡೋದಾಗಿ ಅವರು ತಿಳಿಸಿದರು ಒಳ ಮತ್ತು ಹೊರ ರೋಗಿಗಳಿಗೆ ಅನುಕೂಲವಾಗುವಂತೆ ಹತ್ತು ರೂಪಾಯಿಗೆ ಹೊಟ್ಟೆಯ ಹಸಿವನ್ನು ನೀಗಿಸುವ ಕೆಲಸವನ್ನು ಅನ್ನದಾಸೋಹ ಕೇಂದ್ರದ ಅಧ್ಯಕ್ಷರಾದ ಹಾಗೂ ಗದಗ ಜಿಲ್ಲೆ ಡಿಎಸ್‌ಎಸ್ ಅಧ್ಯಕ್ಷರಾದ ಸಂಜಯ್ ಆರ್ ದೊಡಮನಿ. ತಮ್ಮ ಸ್ವಂತ ಖರ್ಚಿನಿಂದ ನಿರ್ಗತಿಕರಿಗೆ ಹಾಗೂ ಆಸ್ಪತ್ರೆ ಆವರಣದಲ್ಲಿ ಇರುವಂತ ಅವರಿಗೆ ಮಧ್ಯಾಹ್ನ ೧೨ ಗಂಟೆಯಿAದ ಸಂಜೆ ೪ರವರೆಗೆ ಅನ್ನ ದಾಸೋಹ ಮಾಡುವುದಾಗಿತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿಗಳಾದ ಡಾಕ್ಟರ್ ಎಚ್ ಎಲ್ ಗಿರಡ್ಡಿ. ಹಾಗೂ ಭಜಂತ್ರಿ ಡಾಕ್ಟರ್ ಪಾಟೀಲ್, ಡಾಕ್ಟರ್ ಹಾದಿಮನಿ, ಡಾಕ್ಟರ್ ಲಕ್ಷ್ಮಣ್. ಎಸ್ ಎಮ್ ಮರಿಗೌಡ್ರ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಔಷಧಿ ಉಪಚಾರಕ್ಕೆ ಬಂದoತ ವಿವಿಧ ಗ್ರಾಮಗಳರೋಗಿಗಳು ಇನ್ನೂ ಅನೇಕರು ಉಪಸ್ಥಿತರಿದ್ದರು.

ವರದಿ: ವೀರಣ್ಣ ರೋಣ

error: