April 27, 2024

Bhavana Tv

Its Your Channel

ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ

ರೋಣ,:ರೋಣ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಂದನ ಕಾರ್ಯಕ್ರಮ

ಇತ್ತೀಚೆಗೆ ಶಿಕ್ಷಕ ವೃಂದಕ್ಕೆ ಗೌರವ ನೀಡುವ ಗುರುವಂದನೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚಿಸಿದೆ. ಜ್ಞಾನದ ಹಸಿವನ್ನು ತೀರಿಸಿ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ, ಶೈಕ್ಷಣಿಕವಾಗಿ ವಿದ್ಯಾರ್ಥಿ ಗಳನ್ನು ಪ್ರಭುದ್ಧಗೊಳಿಸಿದ ಶಿಕ್ಷಕರ ಸೇವೆಯನ್ನು ಸ್ಮರಿಸುತ್ತಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದು ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ವಿ.ಎಫ್.ಪಾಟೀಲ ಪ್ರೌಢಶಾಲೆಯ 1996-97 ನೇ ಸಾಲಿನ ಎಸ್. ಎಸ್.ಎಲ್.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗುರು-ವಂದನಾ ಸಮಾರಂಭ ಹಾಗೂ ಸ್ನೇಹ ಸಮ್ಮೇಳನದ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಇದೇ ಸಮಯದಲ್ಲಿ ಪೂಜ್ಯ ಶ್ರೀ ಮ.ನಿ.ಪ್ರ.ಸ್ವ.ಗುರುಪಾದ ಮಹಾಸ್ವಾಮಿಗಳು ಗುಲಗಂಜಿಮಠ, ರೋಣ ಪೂಜ್ಯ ಶ್ರೀ ಹಜರತ್ ಸೈಯದ ಷಾ ಸುಲೇಮಾನ ಶಾವ ಅದರಗಾದ ಅಜ್ಜನವರು ರೋಣ ಬಿ ಏ ಪಾಟೀಲ, ಅನಿಲ ವೈದ್ಯ, ಎಸ್ ಬಿ ಕಳಸದ, ಆರ್ ಎಮ್ ಜಹಗೀರದಾರ,ಐ ಪಿ ಕುಲಕರ್ಣಿ, ಬಿ ಐ ಜಕ್ಕಲಿ, ಆರ್ ಎಚ್ ಬೂದಿಹಾಳ, ಯು ಎನ್,ಉಮಚಗಿ, ಕೆ ಎಚ್. ಚಂದ್ರಶೇಖರಪ್ಪ, ಎಸ್ ಐ. ದಿಂಡೂರ,ಎಸ್.ಎಚ್. ಪಾಟೀಲ,
ಎಮ್ ಎಸ್ ಮರೋಳಜಿ, ಎನ್ ತಳವಾರ, ಎಮ್ ವಾಯ್ ಕಿತ್ತಲಿ, ಎಮ್ ಜಿ ಕೊರ್ಲಹಳ್ಳಿ, ನಿವೃತ್ತ ಮುಖ್ಯೋಪಾಧ್ಯಾಯರು ಆರ್ ಎಚ್ ನಾಯಕ, ಎಸ್ ಎಸ್ ಹೊಣ್ಣೂರ, ಜೆ ಎಫ್ ಹುಗ್ಗಿಡಾ, ಎಸ್ ಬಿ ಲಕ್ಕೋಳ, ಎಂ ಎ ಲಿಂಗನಗೌಡ, ಡಿ ಎ ಪಾಟೀಲ, ಜೆ ಎ ಪಾಟೀಲ , ಮಾಜಿ ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ, ಕಡಗದ ಸಂಜಯ ದೊಡ್ಮಮನೆ, ಸರ್ವ ಸದಸ್ಯರು ಶಿಕ್ಷಕರು ಮಕ್ಕಳು ಇದ್ದರು

ವರದಿ:ವೀರಣ್ಣ ಸಂಗಳದ

error: