December 20, 2024

Bhavana Tv

Its Your Channel

ಪೌರಕಾರ್ಮಿಕರಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ

ಇಳಕಲ್: ಅಂಬೇಡ್ಕರ್ ಕಾಲೋನಿಯ ಎಲ್ಲಾ ಪೌರಕಾರ್ಮಿಕರು ಇಂದುನಗರಸಭೆಯ ಮುಂದೆ ಪೌರಾಯುಕ್ತರಿಗೆ ನಮ್ಮ ಎಲ್ಲಾ ಸಾರ್ವಜನಿಕರ ಮನೆಗಳನ್ನ ತೆರವುಗೊಳಿಸದಿರಿ ಎಂದು ಮನವಿ ಕೊಟ್ಟರು. ನಗರಸಭೆಯ ಸದಸ್ಯರು ಸುರೇಶ್ ಜಂಗ್ಲಿ ಮಾತನಾಡಿ
ಅಂಬೇಡ್ಕರ್ ಕಾಲೋನಿಯಲ್ಲಿ ವಾಸಿಸುವ ಮನೆಗಳನ್ನ ತೆರವು ಗೊಳಿಸ ಬೇಡಿ,ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಲು ತೀರ್ಮಾನಿಸಿದ್ದಿರಿ ನೀವು ನಾವು ಸುಮಾರು ವರ್ಷಗಳಿಂದ ವಾಸಮಾಡುತ್ತಿದ್ದೇವೆ. ನಮಗೆ ಪರ್ಯಾಯವಾಗಿ ಯಾವುದೆ ವ್ಯವಸ್ಥೆ ಮಾಡದೆ ಏಕಾ ಏಕಿ ತೀರ್ಮಾನ ಮಾಡಿದ್ದರಿಂದ ನಾವು ಚಿಂತಿಸುವAತಾಗಿದೆ, ಅಲ್ಲದೆ, ನಮಗೆ ಬರುವ ಅಲ್ಪ ವೇತನದಿಂದ ಜೀವನ ನಡೆಸಲು ಕಷ್ಟವಾಗಿದೆ. ಪೌರಕಾರ್ಮಿಕರಿಗೆ ಕೋರೋನ ವಾರಿಯರ್ಸ್ ಅಂತ ಕರೆದಿದ್ದೀರಿ ಆದರೆ ನಮಗೆ ಈ ಪರಿಸ್ಥಿತಿ ಬಂದಿದೆ ಎಂದು ಇಳಕಲ್ ತಾಲ್ಲೂಕಿನ ಪೌರಾಯುಕ್ತರಾದ ರಾಮಕೃಷ್ಣ ಸಿದ್ಧನಕೊಳ್ಳ ಅವರಿಗೆ ಮನವಿ ಸಲ್ಲಿಸಿದರು

error: