ಇಳಕಲ್: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಗಾಣಿಗೇರ ಸಮಾಜದವರು ಹೋರಾಟ ಮಾಡಲಾಗುವುದು ಎಂದು ಅಖಿಲ ಭಾರತ ಗಾಣಿಗೇರ ಸಂಘದ ಅಧ್ಯಕ್ಷ ಗುರಣ್ಣ ಗೋಡಿ(ಮಂಡಗುದ್ಲಿ) ಎಚ್ಚರಿಕೆ ನೀಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ೬೦ ಲಕ್ಷಕ್ಕೂ ಅಧಿಕ ಗಾಣಿಗ ಸಮುದಾಯದ ಜನರಿದ್ದಾರೆ. ಎಲ್ಲ ವರ್ಗದವರಿಗೂ ಆದ್ಯತೆ ನೀಡಿರುವ ಮುಖ್ಯಮಂತ್ರಿ ಅವರು ಗಾಣಿಗ ಸಮಾಜವನ್ನು ಕಡೆಗಣಿಸಿರುವುದು ಬೇಸರದ ಸಂಗತಿಯಾಗಿದೆ. ಬಿಜೆಪಿ ಪಕ್ಷವನ್ನು ಬೆಂಬಲಿಸಿರುವ ನಮ್ಮ ಗಾಣಿಗ ಸಮಾಜಕ್ಕೂ ಸರಕಾರ ಆದ್ಯತೆ ನೀಡಬೇಕು.
ಉತ್ತರ ಕರ್ನಾಟಕ ಭಾಗದ ಅಚ್ಚುಮೆಚ್ಚಿನ ಸಂಘಟನಾಕಾರರು ಮತ್ತು ಉಪಮುಖ್ಯಮಂತ್ರಿಗಳಾಗಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಂಘದ ಗೌರವಾದ್ಯಕ್ಷ ಡಾ. ಶೇಖರ ಸಜ್ಜನ, ಕಾರ್ಯದರ್ಶಿ ಮಲ್ಲಿಕಾರ್ಜುನ ಲೋಣಿ, ಪಿ.ಎಂ. ತಟ್ಟಿಮನಿ, ಅಶೋಕ ನವಲಗುಂದ, ರಮೇಶ ಉಟಗಿ, ಮೀನಾಕ್ಷಿ ಉಟಗಿ ಮತ್ತಿತರರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ ಎಂದು ಗುರಣ್ಣ ಗೋಡಿ ಹೇಳಿದರು.
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ