December 22, 2024

Bhavana Tv

Its Your Channel

ರಕ್ತದಾನ ಶಿಬಿರ ಯಶಸ್ವಿ

ಮಳವಳ್ಳಿ : ೭೫ನೇ ಸ್ವಾತಂತ್ರ‍್ಯ ದಿನದ ಅಂಗವಾಗಿ ಮಳವಳ್ಳಿ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ತಾಲ್ಲೂಕಿನ ಯುವಕ ಮಿತ್ರರ ಬಳಗ ಹಾಗೂ ಹಲವಾರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ತಮ್ಮ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ರಾಷ್ಟ್ರದ ಮಹಾನ್ ನಾಯಕರಾದ ಡಾ. ಬಿ ಆರ್ ಅಂಬೇಡ್ಕರ್, ಡಾ, ಶ್ರೀ ಶಿವಕುಮಾರ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡ, ಮಹಾವೀರ್ ಜೈನ, ಬಾಬು ಜಗಜೀವನ್ ರಾಮ್, ಜ್ಯೋತಿ ರಾವ್ ಬಾಪುಲೆ, ಸಂಗೊಳ್ಳಿ ರಾಯಣ್ಣ ಮುಂತಾದ ಮಹನೀಯರ ಸ್ಮರಣಾರ್ಥ ವಾಗಿ ಈ ಬೃಹತ್ ರಕ್ತದಾನ ಶಿಬಿರ ಬೆಳಿಗ್ಗೆ ೯ ಗಂಟೆಗೆ ಆರಂಭವಾಯಿತು ರಕ್ತದಾನಿ ಗಳು ತಂಡೋಪ ತಂಡವಾಗಿ, ಕೆಲವರು ಕುಟುಂಬ ಸಮೇತ ರಾಗಿ ಆಗಮಿಸಿ ರಕ್ತದಾನ ಮಾಡಿದರು, 7th ಪಿಟ್ ನೆಸ್ ಕೇಂದ್ರದ ೭೦ ಕ್ಕೂ ಹೆಚ್ಚು ಸದಸ್ಯರು ಬೈಕ್ ರಾಲಿ ಮೂಲಕ ಮೆರವಣಿಗೆಯಲ್ಲಿ ಅಗಮಿಸಿ ರಕ್ತದಾನ ಮಾಡಿದರೆ ಮಾಜಿ ಪುರಸಭಾಧ್ಯಕ್ಷ ಎಂ ಎಸ್ ದಯಾಶಂಕರ್ ಅವರು ತಮ್ಮ ಇಬ್ಬರು ಪುತ್ರಿಯರೊಂದಿಗೆ ರಕ್ತದಾನ ಮಾಡಿದರು.
ಆರಂಭದಲ್ಲಿ ಶಿಬಿರಕ್ಕೆ ಆಗಮಿಸಿದ ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ಅವರು ಕಳೆದ ಬಾರಿಯ ಶಿಬಿರದಲ್ಲಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರಕ್ತದಾನ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಯುವಕ ಮಿತ್ರರು ಇಂದು ಸ್ವಾತಂತ್ರ‍್ಯ ದಿನದಂದು ಮಹನೀಯರ ಸ್ಮರಣಾರ್ಥ ರಕ್ತದಾನ ಶಿಬಿರ ಆಯೋಜಿಸಿ ರುವುದು ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.
ಪ್ರತೀ ರಕ್ತದಾನಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಜೊತೆಗೆ ಹಾಲು ಹಣ್ಣು ವಿತರಣೆ ವ್ಯವಸ್ಥೆ ಮಾಡಲಾಗಿತ್ತು,
ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಸಹ ಮಧ್ಯಾಹ್ನ ಶಿಬಿರಕ್ಕೆ ಭೇಟಿ ಶುಭ ಹಾರೈಸಿದರು, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಸಹ ಶಿಬಿರಕ್ಕೆ ಆಗಮಿಸಿ ಸ್ವತಃ ರಕ್ತದಾನ ಮಾಡಿದರು ,
ಸಂಜೆ ನಡೆದ ಸಮಾರೋಪ ಡಾ ಕೆ ಅನ್ನದಾನಿ ಅವರು ದಾಖಲೆಯ ರಕ್ತದಾನದ ಮೂಲಕ ಮಳವಳ್ಳಿ ಯ ಕೀರ್ತಿಯನ್ನು ಹೆಚ್ಚಿಸಿರುವ ತಾಲ್ಲೂಕು ಯುವಕ ಮಿತ್ರರು ಹಾಗೂ ವಿವಿಧ ಸಂಘಟನೆಗಳ ಕಾರ್ಯವನ್ನು ಪ್ರಶಂಸಿಸಿದರು.
ಕಳೆದ ಭಾರಿಯಂತೆ ಅತಿ ಹೆಚ್ಚು ಮಂದಿ ರಕ್ತ ದಾನಿಗಳು ಆಗಮಿಸಿದ್ದ ನೆಲಮಾಕನಹಳ್ಳಿ ಗ್ರಾಮದ ಯುವಕರಿಗೆ ರಕ್ತದಾನಿ ಗಳ ತವರು ಬಿರುದು ನೀಡಲಾಯಿತು.
ಕೆಪಿಸಿಸಿ ಮುಖಂಡರಾದ ದಡದಪುರ ಶಿವಣ್ಣ, ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಹಲಗೂರು ಸುಂದರಪ್ಪ, ನಿವೃತ್ತ ಯೋಧ ಬಿ ಸುರೇಶ್, ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಚಿತ್ರಕಲಾ ಶಿಕ್ಷಕ ಮಾರ್ಕಾಲು ದೇವರಾಜು, ಅತಿ ಹೆಚ್ಚು ರಕ್ತದಾನ ಮಾಡಿರುವ ತಳಗವಾದಿ ಪ್ರಕಾಶ್, ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹೆಸರಾಂತ ವೈದ್ಯರಾದ ಡಾ. ಸುನಿಲ್, ಹಿರಿಯ ಪತ್ರಕರ್ತ ಹಾಗೂ ಸ್ವರ್ಣ ಟಿವಿ ತಾಲ್ಲೂಕು ವರದಿಗಾರ, ಬಿ ಮಲ್ಲಿಕಾರ್ಜುನಸ್ವಾಮಿ ಅವರುಗಳನ್ನು ಸನ್ಮಾನಿಸ ಲಾಯಿತು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: