ರೋಣ :-ಪ್ರಿಯಾಂಕಾ ವಿವಿಧ್ಯೊದ್ದೇಶಗಳ ಸಂಸ್ಥೆ ರೋಣ ಅವರ ತಾಯಿ ಬಳಗ ಅನಾಥ ವೃದ್ದಾಶ್ರಮಕ್ಕೆ ಪರವಾನಗಿ ನೀಡುವುದರ ಕುರಿತು ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸಂಬAಧಿತ ಇಲಾಖಾ ಅಧಿಕಾರಿಗಳ ದುರುದ್ದೇಶದ ನಡೆಯನ್ನು ಖಂಡಿಸಿ ಸೋಮವಾರ ತಾಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ ಇವರ ಕಛೇರಿಯ ಮುಂದೆ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿಧ್ಯಾರ್ಥಿ ಪರಿಷತ್ ರೋಣ ತಾಲೂಕಾ ಘಟಕದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು ಧರಣಿ ನಿರತ ಸ್ಥಳಕ್ಕಾಗಮಿಸಿದ ಸಂಬAಧಿತ ಜಿಲ್ಲಾ ಅಧಿಕಾರಿಗಳು ಇಪ್ಪತ್ತು ದಿನಗಳ ಒಳಗಾಗಿ ಪರವಾನಗಿ ಪತ್ರ ನೀಡುವುದಾಗಿ ಭರವಸೆಯನ್ನು ನೀಡಿದ ಕಾರಣ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಮಾತಿಗೆ ತಪ್ಪಿದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಛೆರಿಯ ಮುಂದೆ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಅಂತ ಎಚ್ಚರಿಸಿ.ಬೇಡಿಕೆಗಳ ಮನವಿಯನ್ನು ರಾಜ್ಯಪಾಲರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಜಿಲ್ಲಾ ಮಹಿಳಾ ಸಬಲೀಕರಣ ಅಧಿಕಾರಿಗಳಿಗೆ ಹಾಗೂ ಮಾನವ ಹಕ್ಕುಗಳ ಆಯೋಗ ಬೆಳಗಾಂವಿ ಇವರಿಗೆ ತಹಶಿಲ್ದಾರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ಮೌನೇಶ ಹಾದಿಮನಿ. ಬಸವರಾಜ ಕಾಳೆ.ದೇವೇಂದ್ರ ಕೊಳ್ಳಪ್ಪನವರ.ಬಾಳಪ್ಪ ಭಜಂತ್ರಿ.ಬಸವರಾಜ.ಎಚ್. ಹಲಗಿ.ಹನಮಂತ ಬೆಳವಣಿಕಿ. ಮುತ್ತು ಬೆಳವಣಿಕಿ.ಶೇಖಪ್ಪ ಜೋಗಣ್ಣವರ.ಹನಮಂತ ಭಜಂತ್ರಿ.ಮುAತಾದ ದಲಿತ ಮುಖಂಡರು ಹಾಗೂ ದಲಿತ ಮಹಿಳಾ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ