December 22, 2024

Bhavana Tv

Its Your Channel

ಶಾಸಕ ಕಳಕಪ್ಪ ಜಿ. ಬಂಡಿರವರ ಜನ್ಮ ದಿನಕ್ಕೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ರೋಣ: ಕೆ.ಎಸ್.ಎಸ್.ಐ.ಡಿ.ಸಿ ಅಧ್ಯಕ್ಷರು ಹಾಗೂ ರೋಣ ಮತ ಕ್ಷೇತ್ರದ ಶಾಸಕರಾದ ಕಳಕಪ್ಪ ಜಿ. ಬಂಡಿ ಅವರ ಜನ್ಮ ದಿನದ ಪ್ರಯುಕ್ತ ರೋಣ ಮಂಡಲ ಎಸ್. ಟಿ. ಮೋರ್ಚಾದ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಮಂಗಳವಾರ ಹಣ್ಣು ಹಂಪಲು ವಿತರಿಸಲಾಯಿತು.
ರೋಣ ಪುರಸಭೆ ೧೬ನೇ ವಾರ್ಡಿನ ಸದಸ್ಯ ಸಂತೋಷ ಕಡಿವಾಲ ಮಾತನಾಡಿ, ಶಾಸಕ ಕಳಕಪ್ಪ ಜಿ. ಬಂಡಿ ಅವರು ರೋಣ ಕ್ಷೇತ್ರದ ಅಭಿವೃದ್ದಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಕ್ಷೇತ್ರದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕೃಷಿ ಕೇತ್ರದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಸದಾ ಜನರ ಕಷ್ಟಗಳಿಗೆ ಸ್ಪಂದಿಸುತಾರೆ. ಆದ್ದರಿಂದ ಅವರ ಸೇವೆ ಕ್ಷೇತ್ರಕ್ಕೆ ನಿರಂತರವಾಗಿ ದೊರೆಯುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಟಿ. ಮೋರ್ಚಾ ಅಧ್ಯಕ್ಷ ನಾಗರಾಜ ತಳವಾರ, ರಾಜಕುಮಾರ ಕೋಣಣ್ಣವರ, ಭೀಮಸಿ, ಹನುಮಂತಪ್ಪ ತಳವಾರ ಇದ್ದರು.

ವರದಿ: ವೀರಣ್ಣ ರೋಣ

error: