December 22, 2024

Bhavana Tv

Its Your Channel

ರೈತರ ವಿಶ್ವಾಸ ಪಡೆದ ಕೆ.ಸಿ.ಸಿ. ಬ್ಯಾಂಕ್

ರೋಣ:ಎಲ್ಲಾ ಸಂದರ್ಭದಲ್ಲೂ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಕೆ.ಸಿ.ಸಿ. ಬ್ಯಾಂಕ್ ಕೆಲಸ ಮಾಡುತ್ತಿದ್ದೆ. ಈ ಕಾರಣದಿಂದಾಗಿಯೇ ವಾಣಿಜ್ಯ ಬ್ಯಾಂಕ್ಗಳಿಗಿAತಲೂ ಮಿಗಿಲಾದ ಸೌಲಭ್ಯವನ್ನು ರೈತರಿಗೆ, ಸದಸ್ಯರಿಗೆ ನೀಡುತ್ತಿದ್ದೇವೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಹೇಳಿದರು.

ಕೆ.ಸಿ.ಸಿ ಬ್ಯಾಂಕ್ ಹಾಗೂ ರೋಣ ತಾಲ್ಲೂಕಿನ ಎಲ್ಲಾ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ ಪಟ್ಟಣದ ಎ.ಪಿ.ಎಂಸಿ ಆವರಣದಲ್ಲಿ ಬುಧವಾರ ನಡೆದ ನೂತನವಾಗಿ ಆಯ್ಕೆಗೊಂಡಿರುವ ಗದಗ ಜಿಲ್ಲಾ ಕೆಸಿಸಿ ಬ್ಯಾಂಕ್ ನಿರ್ದೇಶಕರ ಹಾಗೂ ಪಧಾಧಿಕಾರಿಗಳಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹವಾಮಾನ ವೈಪರೀತ್ಯದಿಂದಾಗುವ ಬೆಳೆಗಳ ಹಾನಿ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಕೃಷಿ ಕ್ಷೇತ್ರಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನೀಡುವ ಮೊದಲು ರೈತರಿಗೆ ಸಾಲಸೌಲಭ್ಯ ನೀಡಿದೆ. ಅಷ್ಟೇ ಅಲ್ಲದೆ ರೈತ ಆರ್ಥಿಕವಾಗಿ ಸಬಲನಾಗಲು ಯೋಚಿಸಿದ ಮೊದಲ ಬ್ಯಾಂಕ್ ಕೆ.ಸಿ.ಸಿ. ಆಗಿದೆ ಎಂದರು.
ಅನ್ನದಾತರನ್ನು ವಿಶ್ವಾಸಕ್ಕೆ ಪಡೆದು ಸಹಕಾರಿ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಕೆ.ಸಿ.ಸಿ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜೀವನಾಡಿ ಆಗಿದೆ ಎಂದರು.
ಕೆಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ, ಸಹಕಾರ ಅಭಿವೃದ್ದಿ ಅಧಿಕಾರಿ ಪ್ರಶಾಂತ ಮುಧೋಳ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ. ನಿರ್ದೇಶಕರಾದ ಐ.ಎಸ್. ಪಾಟೀಲ, ಎಲ್.ಎಸ್. ಚಪ್ಪರಳ್ಳಿ, ಎಸ್.ಡಿ. ಕೊಳ್ಳಿ, ಎಂ. ಎಸ್. ಕಲಗುಡಿ ಇದ್ದರು.

ರೋಣ ನಗರದ ಕೆಸಿಸಿ ಬ್ಯಾಂಕ್ ಹಾಗೂ ತಾಲ್ಲೂಕಿನ ಎಲ್ಲಾ ಪ್ರಾ. ಕೃ. ಪ. ಸ. ಸಂಘಗಳ ಆಶ್ರಯದಲ್ಲಿ ನಡೆದ ಜಿಲ್ಲಾ ಕೆಸಿಸಿ ಬ್ಯಾಂಕ್ ನಿರ್ದೇಶಕರ ಹಾಗೂ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮವನ್ನು ಕೆಸಿಸಿ ಬ್ಯಾಂಕ್ ನಿರ್ದೆಶಕ ಜಿ.ಪಿ. ಪಾಟೀಲ ಉದ್ಘಾಟಿಸಿದರು.

ವರದಿ ವೀರಣ್ಣ ಸಂಗಳದ ರೋಣ

error: