December 21, 2024

Bhavana Tv

Its Your Channel

ವಿಧವೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ರೋಣ: ಪಟ್ಟಣದ ೧೯ನೇ ವಾರ್ಡಿನಲ್ಲಿ ೪ನೇ ಬಾರಿಗೆ ವಿಧವಾ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ರೈತ ಮಹಿಳಾ ಸಂಘದ ವತಿಯಿಂದ ಮಂಗಳವಾರ ನಡೆಸಲಾಯಿತು.

ಈ ವೇಳೆ ಮಾತನಾಡಿದ ರೈತ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷೆ ನೀಲಾ ಚಿತ್ರಗಾರ, ಸಾವು ಯಾರ ಬದುಕಿನಲ್ಲಿ ಹೇಗೆ ಬರುತ್ತದೆಯೋ ತಿಳಿಯದು ಆದರೆ ಗಂಡನ ಅಗಲಿಕೆಯಿಂದ ಜೀವನಪೂರ್ತಿ ಯಾವುದೇ ಆಚರಣೆಯಲ್ಲಿ ಪಾಲ್ಗೊಳ್ಳದೆ ಇರುವ ಮಹಿಳೆಯರ ಜೀವನ ಕಷ್ಟಕರವಾಗಿದೆ ಎಂದರು.

ಈ ಹಿಂದೆ ಆಚರಣೆಯಲ್ಲಿದ್ದ ಹಲವು ಅನಿಷ್ಟ ಪದ್ದತಿಗಳನ್ನು ಕೈಬಿಡಲಾಗಿದೆ. ಅದರಂತೆ ವಿಧವೆ ಮಹಿಳೆಯರನ್ನು ಆಚರಣೆಗಳಿಂದ ದೂರ ಇಡುವ ಪದ್ದತಿ ತೆಗೆಯಬೇಕು. ಚಿಕ್ಕ ವಯಸ್ಸಿನಲ್ಲೇ ಗಂಡನನ್ನುಕಳೆದುಕೊಂಡು ಪರದಾಡುತ್ತಿರುವ ಮಹಿಳೆಯರ ಪಾಡು ನೋಡಲಾಗದು ಆದಕಾರಣ ಅನಿಷ್ಟ ಪದ್ದತಿಗಳನ್ನು ಕೈಬಿಡಬೇಕು ಎಂದರು.

ಈ ವೇಳೆ ೫೦ಕ್ಕೂ ಹೆಚ್ಚು ಜನರಿಗೆ ಉಡಿ ತುಂಬಲಾಯಿತು.

ಈ ಸಂದರ್ಭದಲ್ಲಿ ಸುವರ್ಣ ಬಾಗೂರಮಠ, ಸುನಂದ ಚಿತ್ರಗಾರ, ಶಶಿಕಲಾ ಚಿತ್ರಗಾರ, ಬಿಬಿಜಾನ ಹರ್ಲಾಜ್, ಗೀತಾ ನಂದಿಕೋಲ, ಶಾರದ ಚಲವಾದಿ, ಬುಡ್ಡಿಮಾ ಪಲ್ಲೇದ, ರಜಿಯಾ ಚೋಪದಾತ, ಅನ್ನಪೂರ್ಣ ಹುಬ್ಬಳ್ಳಿ ಇದ್ದರು.

ವರದಿ ವೀರಣ್ಣ ಸಂಗಳದ

error: