December 21, 2024

Bhavana Tv

Its Your Channel

ಗಾಯಾಳುಗಳಿಗೆ ಸ್ಪಂದಿಸಿದ ಸಚಿವ ಸಿ ಸಿ ಪಾಟೀಲ

ರೋಣ : ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಸಮೀಪ ರವಿವಾರ ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು, ಇದೇ ಸಂದರ್ಭದಲ್ಲಿ ಅಲ್ಲಿ ತೆರಳುತ್ತಿದ್ದ ರಾಜ್ಯ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲರು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಗಾಯಾಳುಗಳ ರಕ್ಷಣೆಗೆ ಮುಂದಾಗಿ ಮಾನವೀಯತೆ ಮೆರೆದರು.
ಈ ಇಬ್ಬರು ಮಹಿಳಾ ಗಾಯಾಳುಗಳನ್ನು ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲು ವಾಹನ ವ್ಯವಸ್ಥೆ ಮಾಡಿಸಿದ ಸಚಿವರು, ಇವರ ಚಿಕಿತ್ಸೆಗೆ ಸ್ಥಳದಲ್ಲೇ ಆರ್ಥಿಕ ಸಹಾಯವನ್ನು ನೀಡಿ ಸ್ಪಂದಿಸಿದರು. ಸಚಿವರಾದ ಸಿ.ಸಿ.ಪಾಟೀಲರ ಈ ಕ್ರಮಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.
ವರದಿ ವೀರಣ್ಣ ಸಂಗಳದ ರೋಣ

error: