ರೋಣ: ರೈತ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಲು, ಫಸಲ್ ಭೀಮಾ ಯೋಜನೆಯೆಡಿ ಬೆಳೆ ಪರಿಹಾರ ಸಿಗದೇ ಇರುವ ಕುರಿತು, ಸಬ್ಸಿಡಿಯಲ್ಲಿ ಬೀಜ ಗೊಬ್ಬರ ರೈತರಿಗೆ ವಿತರಣೆ ಮಾಡದೇ ಇರುವ ಕುರಿತು, ಮಹಾದಾಯಿ ನದಿ ಜೋಡಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ನರಗುಂದಕ್ಕೆ ಹೋರಾಟಕ್ಕಾಗಿ ಭಾನುವಾರ ಪ್ರಯಾಣ ಬೆಳೆಸಿದರು.
ಈ ಮೊದಲು ರೋಣ ನಗರದಲ್ಲಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರಯ್ಯ ಬಿ. ವಸ್ತ್ರದ, ಅನ್ನದಾತ ದೇಶದ ಬೆನ್ನೆಲುಬು ಎಂದು ಹೇಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದಿಂದ ಸಿಗುವ ಯೋಜನೆಗಳನ್ನು ತಲುಪಿಸದೇ ಅನ್ಯಾಯ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಮಳೆಯಾಶ್ರಿತ ಭೂಮಿಗೆ ಬೆಳೆ ಬಂದAತಹ ರೈತರಿಗೆ ಬೆಂಬಲ ಬೆಲೆ ನಿಗದಿಯಾದರು ಕೂಡ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಬೆಳೆ ವಿಮೆ ಒಬ್ಬರಿಗೆ ಬಂದರೆ ಇನ್ನೊಬ್ಬರಿಗೆ ಬರುತ್ತಿಲ್ಲ. ಬೀಜ ಗೊಬ್ಬರ ವಿತರಣೆಯಲ್ಲಿ ಯಾವಾಗಲೂ ಅನ್ಯಾಯ ಆಗುತ್ತಿದೆ. ಆದಕಾರಣ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದರು.
ಹೊಸಳ್ಳಿ, ಇಟಗಿ, ಜಕ್ಕಲಿ, ಮಾರನಬಸರಿ, ನಿಡಗುಂದಿ, ಕಳಕಾಪುರ, ಮಲ್ಲಾಪುರ ಗ್ರಾಮಗಳ ರೈತ ಸಂಘದ ಸದಸ್ಯರು ನರಗುಂದಕ್ಕೆ ಪ್ರತಿಭಟನೆಗೆ ಭಾಗವಹಿಸಲು ರೋಣದಿಂದ ಪ್ರಯಾಣ ಬೆಳೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ್ರು, ಉಪಾಧ್ಯಕ್ಷ ಎಫ್. ಐ. ಕುರಿ, ಮಹಿಳಾ ಉಪಾಧ್ಯಕ್ಷೆ ಉಮಾದೇವಿ ಹಿರೇಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ರೆಡ್ಡೇರ, ಈರಪ್ಪ ಹನುಮಂತಪ್ಪ ತಳವಾರ, ರೈಮಾನಸಾಬ್ ಗಡಾದ ಇದ್ದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ