December 21, 2024

Bhavana Tv

Its Your Channel

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪ್ರವೇಶ ಪರೀಕ್ಷಾ ಉದ್ಘಾಟನಾ ಸಮಾರಂಭ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ಎಸ್.ಆರ್.ಎನ್.ಇ. ಫೌಂಡೇಶನ್ ಹಾಗೂ ಸಂಕಲ್ಪ ಕೋಚಿಂಗ್ ಸೆಂಟರ್, ಧಾರವಾಡ ಇವರ ಸಹಯೋಗದೊಂದಿಗೆ ಕೆಎಎಸ್. ಪಿಎಸ್‌ಐ, ಪಿಸಿ ನಂತಹ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪ್ರವೇಶ ಪರೀಕ್ಷಾ ಉದ್ಘಾಟನಾ ಸಮಾರಂಭವು ಎಸ್.ಆರ್.ಎನ್.ಇ ಫೌಂಡೇಶನ ಸಂಸ್ಥಾಪಕರು ಅಧ್ಯಕ್ಷರಾದ ಎಸ್. -ಆರ್.ನವಲಿ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ನಿವೃತ್ತ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಾದ ಡಾ.ಶಂಕರ ಬಿದರಿ ಈ ತರಬೇತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಲ್ಲಿ ಅರ್ಜಿಹಾಕಿ ಸೇರಿರುವ ೧೪೫೦ ವಿದ್ಯಾರ್ಥಿಗಳು ಕೇಂದ್ರ &ರಾಜ್ಯ ಸರ್ಕಾರದಲ್ಲಿರುವ ವಿವಿಧ ಹುದ್ದೆಗಳಲ್ಲಿ ಈ ಭಾಗದ ಗಂಡು&ಹೆಣ್ಣು ಎಂಬ ಭೇದಭಾವವಿಲ್ಲದೆ ಎಲ್ಲರು ಈ ಮಹತ್ವದ ಅವಕಾಶವನ್ನು ಪಡೆಯಲೆಂದು ಇಂದು
೧೦೦ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಜೊತೆಗೆ ಹೆಚ್ಚಿನ ಅಂಕವನ್ನು ಪಡೆದ ೧೫ ವಿದ್ಯಾ ರ್ಥಿಗಳಿಗೆ ಎಲ್ಲ ಖರ್ಚು ವೆಚ್ಚ ಭರಸಿ ತರಬೇತಿ ಕೇಂದ್ರ ತೆರೆದ ನವಲಿ ಹಿರೆಮಠರಿಗೆ ಅಭಿನಂದನೆ ಸಲ್ಲಿಸತ್ತ ಈಸೇವೆಯನ್ನು ಇಲಕಲ್ಲ&ಹುನಗುಂದಕ್ಕೆ ಸೀಮತಗೊಳಿಸದೇ,ಉತ್ತರ ಕರ್ನಾಟಕದ ಎಲ್ಲರಿಗೂ ಉಪಯೋಗವಾಗುವ ಕೆಲಸವಾಗಲೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಆರ್.ನವಲಿ ಹಿರೇಮಠ ಧಾರವಾಡನಲ್ಲಿ ೨ಎಕರೆ ಜಮೀನನ್ನು ಖರೀದಿಸಿ ಅವಕಾಶ ವಂಚಿತ,ಪ್ರತಿಭಾವAತ ಈ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯ ವ್ಯವಸ್ಥೆ ಮಾಡಿಕೊಡುವುದಾಗಿಮತ್ತು ಬಿದರಿಯವರ ಕುಟುಂಬದ ಕೈಗಳಿಂದಲೇ ಉದ್ಘಾಟಿಸುವುದಾಗಿ ಘೋಷಿಸಿದರು. ಅತಿಥಿಗಳಾಗಿ ಅಬ್ದುಲ್ ರಜಾಕ ತಟಗಾರ& ಸಂಕಲ್ಪ ಕೋಚಿಂಗದ ಮಾರ್ಗದರ್ಶಕರು ತಮ್ಮ ಅನಿಸಿಕೆಗಳನ್ಮು ಹಂಚಿ ಕೊಂಡರು. ಸಮಾರಂಭದಲ್ಲಿ ಪಿಎಸ್ ಐ ಶರಣಬಸಪ್ಪ ಸಂಗಳದ, ಶಾಂತಯ್ಯಮಠ, ಅರ್ಷದನಾಯಿಕ, ಬಿ.ಹೆಸರೂರ,ಎಮ್.ಗಾಣಗೇರ,ಸಿ.ಬಿ ಸಜ್ಜನ,ಮಲ್ಲು ಕಮರಿ,ಇತರೆ ಫೌಂಡೇಶನ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಇದ್ದರು.

ವರದಿ ಮಾಂತೇಶ ಕುರಿ

error: