December 22, 2024

Bhavana Tv

Its Your Channel

ಮೂಲಭೂತ ಸೌಕರ್ಯ ವಂಚಿತ ಬಡಾವಣೆ, ಸ್ಪಂದಿಸದ ಸದಸ್ಯ ಹಾಗೂ ಪುರಸಭೆಯ ಅಧಿಕಾರಿಗಳು.

ಇಂಡಿ: “ಮೂಲಭೂತ ಸೌಕರ್ಯ ವಂಚಿತ ಬಡಾವಣೆ, ರಸ್ತೆ ಹಾಗೂ ಬೀದಿ ವಿದ್ಯುತ್ ದೀಪ ಇಲ್ಲದ ವಾರ್ಡ್, ಕೆಸರು ರಸ್ತೆಯಲ್ಲೆ ಜನರ ಸಂಚಾರ, ಹತ್ತಾರು ಬಾರಿ ಮನವಿ ಮಾಡಿಕೊಂಡ್ರೂ ಸ್ಪಂದಿಸದ ವಾರ್ಡ್ನಂ ೬ ರ ಸದಸ್ಯ ಹಾಗೂ ಇಂಡಿ ಪುರಸಭೆ”ಯ ಅಧಿಕಾರಿಗಳು.

ಇಂಡಿ ಪಟ್ಟಣದ ವಾರ್ಡ್ ನಂ.೬ ರಲ್ಲಿ ಜನರು ಸಮರ್ಪಕ ಮೂಲ ಸೌಲಭ್ಯಗಳಿಂದ ವಂಚಿತಗೊAಡಿದ್ದು, ನಿವಾಸಿಗಳು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ರೂ, ತಪ್ಪದ ಪರದಾಟ…
ಈ ವಾರ್ಡಿನ ರಸ್ತೆಗಳೆಲ್ಲ ಮಳೆಗಾಲದ ಸಮಯದಲ್ಲಿ ಕೆಸರು ಗದ್ದೆಯಂತಾಗಿ ಜನರು ಓಡಾಡಲು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ.
ಇನ್ನೂ ಬೀದಿ ವಿದ್ಯುತ್ ಕಂಬಗಳಿದ್ದು, ದೀಪಗಳು ಬೆಳಗುತ್ತಿಲ್ಲ. ಇದರಿಂದಾಗಿ ರಾತ್ರಿ ಹೊತ್ತು ವಾರ್ಡ್ ನಂ.೬ರ ನಿವಾಸಿಯ ಮಕ್ಕಳು ಹಾಗೂ ವೃದ್ಧರು ಸಂಚರಿಸಲು ಬೆಳಕಿಲ್ಲದೆ ಕಗ್ಗತ್ತಲ್ಲೇ ಓಡಾಟ ನಡೆಸುವಂತಾಗಿದೆ…
ರಾತ್ರಿ ಹೊತ್ತಿನಲ್ಲಿ ಇಲ್ಲಿ ಸಂಚರಿಸಿದರೆ ಎಲ್ಲಿ ಕೊಳಚೆ ನೀರಿನಲ್ಲಿ ಬೀಳುತ್ತೆವೆ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ, ಬಡಾವಣೆಯ ರಸ್ತೆಯಲ್ಲಿ ಡ್ರ‍್ಯಾನೇಜ್ ನಿರ್ಮಾಣ ಮಾಡಿದ್ದರೂ ಅದು ಕಳಪೆ ಮಟ್ಟದ ಕಾಮಗಾರಿ ಮಾಡಿದ್ದಾರೆ
ಡ್ರ‍್ಯಾನೇಜ್ ಒಡೆದು ಹೋಗಿ ರಸ್ತೆಯ ಮೇಲೆ ಕೊಳಚೆ ನೀರು ಸಂಗ್ರಹವಾಗುತ್ತಿದ್ದು ಹಾಗೂ ಮಳೆ ನೀರು ನಿಲ್ಲುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿವೆ ರೋಗ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಇಲ್ಲಿನ ವಾರ್ಡ್ ನಿವಾಸಿಗಳೇಲ್ಲ ಜೊತೆಗೂಡಿ ಸಾಕಷ್ಟು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ರೂ, ಯಾವೊಬ್ಬ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲವೆoದು ನೋವಿನಿಂದ ಅಳಲು ತೋಡಿಕೊಂಡರು..
ವರದಿ:ಬಿ ಎಸ್ ಹೊಸುರ್ ಇಂಡಿ

error: