December 20, 2024

Bhavana Tv

Its Your Channel

ಗುರುಭವನದಲ್ಲಿ ಶಿಕ್ಷಕರ ದಿನಾಚರಣೆ

ಗದಗ: ರೋಣ ನಗರದ ಗುರುಭವನದಲ್ಲಿ ಇಂದು ಶಿಕ್ಷಕರ ದಿನಾಚರಣೆಯಲ್ಲಿ ಕಳಕಪ್ಪ ಬಂಡಿ ಶಾಸಕರು ಮಾತನಾಡಿ ಶಾಲಾ ಕೊಠಡಿಯಲ್ಲೆ ಸಮಾಜದ ಭವಿಷ್ಯ ಅಡಗಿದೆ ಮಾನವೀಯ ಮೌಲ್ಯದ ನೆಲೆ ಕಾಣಿಸಿ ಭವಿಷ್ಯತ್ತಿನ ಕಾಲಕ್ಕೆ ಜ್ಞಾನದ ಭದ್ರ ಬುನಾದಿಯನ್ನು ಹಾಕಿ ಪೋಷಣೆ ಮಾಡುವ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರೆಂಬ ಶಿಲ್ಪಿಗಳೇ ನಾಡಿನ ರಕ್ಷಕ ಪೋಷಕ ಬಂಧುಗಳು ಬದುಕಿಗೊಂದು ಚೌಕಟ್ಟು ಕಲ್ಪಿಸಿ ನ್ಯಾಯ ಸಮ್ಮತವಾದ ಹಕ್ಕುಗಳ ಪರಿಪಾಲನೆಗೆ ಬೆನ್ನು ತಟ್ಟಿ ನಿಜ ಅರ್ಥದ ಜೀವನದ ದಾರಿಗೆ ಕೈ ತೋರುವ ಶಿಕ್ಷಕರ ಋಣ ತೀರಿಸಲಾಗದು!ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ ಮಾತನಾಡಿ ಶಿಕ್ಷಕರ ದಿನಾಚರಣೆಯನ್ನು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ , ಸರ್ವಪಲ್ಲಿ ರಾಧಾಕೃಷ್ಣನ್‌ರವರು ಭಾರತದ ಎರಡನೇ ರಾಷ್ಟ್ರಪತಿ ಗಳಾಗಿದ್ಧರು ಹಾಗೂ ಒಬ್ಬ ಹೆಸರಾಂತ ಶಿಕ್ಷಣ ತಜ್ಞರಾಗಿದ್ಧರು.

ಶಿಕ್ಷಕರ ದಿನಾಚರಣೆಯ ಆಚರಣೆಯೇ ಇತಿಹಾಸ:- ಸರ್ವಪಲ್ಲಿ ರಾಧಾಕೃಷ್ಣನ್‌ರವರ ವಿದ್ಯಾರ್ಥಿಗಳು ಅವರ ಬಳಿ ಬಂದು ನಿಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿoದ ಆಚರಿಸಲಿದ್ದೇವೆ ತಾವು ಖಂಡಿತಾ ಬರಬೇಕೆಂದು ಆಹ್ವಾನಿಸಿದರಂತೆ ಅದಕ್ಕುತ್ತರವಾಗಿ ಡಾ.ರಾಧಾಕೃಷ್ಣನ್ ರವರು ಇ ದಿನವನ್ನು ತನ್ನ ಹುಟ್ಟು ಹಬ್ಬವನ್ನಾಗಿ ಆಚರಿಸುವ ಬದಲು ಶಿಕ್ಷಕರ ದಿನವೆಂದಕೇ ಆಚರಿಸಬಾರದು ? ಇದರಿಂದ ನನಗೆ ಹೆಮ್ಮೆ ಸಂತೋಷವಾಗುತ್ತದೆ ಎಂದರoತೆ ಗಂಭೀರವಾಗಿ ಪರಿಗಣಿಸಿದ ವಿದ್ಯಾರ್ಥಿಗಳು ಅಂದಿನಿoದಲೂ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರoತೆ ಅಂದಿನಿoದ ಪ್ರತಿವರ್ಷ ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ದೇಶಾದ್ಯಂತ ಆಚರಿಸುತ್ತಾ ಬರಲಾಗುತ್ತದೆ,೧೯೬೨ ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಗೆ ಕೊಡುಗೆ ನೀಡಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನ, ಮೊದಲ ಕಾರ್ಯಕ್ರಮದಲ್ಲಿ ಅವರೇ ಹೇಳಿದಂತೆ “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಿರಬೇಕು”ಎಂದು ಕರೆ ನೀಡಿದರು, ಈ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ” ಶಿಕ್ಷಕರ ದಿನ’ ಮಕ್ಕಳು ಆಚರಿಸುವ ಮೂಲಕ ನಾವೆಲ್ಲರು ಶಿಕ್ಷಕರಿಗೆ ನೀಡುವ ಗೌರವಎಂದು ಹೇಳಿದರು
ನಿವೃತ್ತಿ, ಮರಣ ಹೊಂದಿದ ಶಿಕ್ಷಕ ಶಿಕ್ಷಕಿಯರಿಗೆ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷರು ರಾಜಣ್ಣ ಹೂಲಿ ರೋಣ ಮಂಡಲ ಅಧ್ಯಕ್ಷರು ಮತ್ತು ಕಡಗದ ಜೆ ಬಿ ಜಕ್ಕನಗೌಡ್ರ ಅಭಿಷೇಕ ಇನಾಂದಾರ ವೈ ಡಿ ಗಾಣಿಗೇರ ಶಿಕ್ಷಕ- ಶಿಕ್ಷಕಿಯರು ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು
ವರದಿ: ವೀರಣ್ಣ ಸಂಗಳದ

error: