May 5, 2024

Bhavana Tv

Its Your Channel

ದಿನಾಂಕ ೧೩ ರಂದು ರೈತರಿಂದ ವಿಧಾನ ಸೌಧ ಮುತ್ತಿಗೆ:-

ಬಾಗೇಪಲ್ಲಿ: ಭೂಸುಧಾರಣ ಕಾಯ್ದೆ ಎ.ಪಿ.ಎಂ.ಸಿ ಕಾಯ್ದೆ ಸೇರಿದಂತೆ ಹಲವಾರು ನಿಯಮವಳಿಗಳಿಗೆ ತಿದ್ದುಪಡಿ ಸೇರಿದಂತೆ ಹಲವಾರು ರೈತವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರ ಮೇಲೆ ಏರಲು ಹೋರಟಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ವಾಪಸ್ ಪಡೆಯ ಬೇಕೆಂದು ಹೋತ್ತಾಯಿಸಿ ಬಾಗೇಪಲ್ಲಿ ತಾಲ್ಲೂಕು ಘಟಕದ ವತಿಯಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನಸೌದಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿವೆ.

ಬಾಗೇಪಲ್ಲಿ ತಾಲ್ಲೂಕು ರಾಜ್ಯ ಹಸಿರು ಸೇನೆ ಸಂಚಾಲಕ ಲಕ್ಷ್ಮಣ ರೆಡ್ಡಿ ಬಾಗೇಪಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರಕ್ಕೆ ಅಧಿವೇಶನಕ್ಕೂ ಮುನ್ನ ರೈತರು ಹಾಗೂ ರೈತ ಮುಖಂಡರು ಎಚ್ಚರಿಕೆ ಕೋಡುವ ಮೂಲಕ ಕೃಷಿವಲಯವನ್ನು ಖಾಸಗೀಕರಣ ಗೋಳಿಸುವ ದೃಷ್ಟಿಯಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಕಿ, ಪರಂಪರಾಗತವಾಗಿ ಕೃಷಿಯೆ ನನ್ನ ಬದುಕು ಸಂಸ್ಕೃತಿ ನನ್ನ ಜೀವನ ಎಂದು ನಂಬಿರುವ ರೈತರನ್ನು ಕೃಷಿಯಿಂದ ಹೋರಹಾಕುವ ದೃಷ್ಟಿಯಿಂದ ಈ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ.
ರೈತನ ಭೂಮಿಗೆ ಹೆಚ್ಚು ಬೆಲೆ ತಂದುಕೋಡಲು ನಮ್ಮ ಸರ್ಕಾರ ಮುಂದಾಗಿದೆ ಎಂಬ ಘೋಷಣೆ ಮಾಡುತ್ತಿರುವ ಸರ್ಕಾರ ರೈತ ಹಾಗೂ ಭೂಮಿಯನ್ನು ಬೇರೆ ಮಾಡಿ ರೈತರನ್ನು ನಗರಗಳಿಗೆ ವಲಸೆ ಹೊಗುವಂತೆ ಮಾಡುತ್ತಿದೆ, ಭೂಮಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸುವಾಗ ನಾನು ರೈತರ ಮಗ ನಮ್ಮದು ರೈತಪರ ಸರ್ಕಾರ ರೈತರ ಕಷ್ಟಗಳನ್ನು ದೂರ ಮಾಡುತ್ತೆನೆ ರೈತರ ನೆಮ್ಮದಿಯಿಂದ ಬದುಕುವಂತೆ ಮಾಡುತ್ತೆನೆ ಎಂದು ಅಧಿಕಾರ ಸ್ವೀಕರಿಸಿದ್ದರು. ಈಗ ಮಾಡಿರುವುದು ಏನು ಎಂದು ಪ್ರಶ್ನೆ ಮಾಡಿರುವ ರೈತ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಯ್ದೆಯನ್ನು ಹಿಂಪಡೆಯುವ ತನಕ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದೇವೆ ಹಾಗೂ ರೈತರು ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪತ್ರಿಕಾ ಮಾದ್ಯಮ ಮೂಲಕ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಸಿರು ಸೇನೆ ರಾಜ್ಯ ಸಂಚಾಲಕ ಲಕ್ಷ್ಮಣ ರೆಡ್ಡಿ, ರಾಜ್ಯ ಮಹಿಳಾ ಸಂಚಾಲಕಿ ಸಿ.ಉಮಾ, ಪ್ರಧಾನ ಕಾರ್ಯದರ್ಶಿ ಟಿ.ರಘುನಾಥ್ ರೆಡ್ಡಿ ಚೌಡರೆಡ್ಡಿ ಕೆ.ಎ.ಈಶ್ವರ ರೆಡ್ಡಿ ,ರಮಣ,ಟಿ.ಆರ್. ಪ್ರಮೀಳಾ,ಎ.ವಿ.ವೆಂಕಟರಾಮಯ್ಯ, ಶ್ರೀನಿವಾಸ್, ವೆಂಕಟ ರೆಡ್ಡಿ, ಚಾಂದ್ ಬಾಷಾ,ಶ್ರೀನಿವಾಸ್ ನಾಯಕ್, ಬಿ.ಎಂ.ಬಯ್ಯಾರೆಡ್ಡಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ

error: