December 21, 2024

Bhavana Tv

Its Your Channel

ಅಕಾಲಿಕ ಮರಣ ಹೊಂದಿದ ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಯಲಗುರದಪ್ಪ ಗೌಡರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚನೆ.

ಬಾಗಲಕೋಟೆ: ಅಕಾಲಿಕ ಮರಣ ಹೊಂದಿದ ಪುರಸಭೆ ಮಾಜಿ ಅಧ್ಯಕ್ಷರು ತಾಲೂಕಿನ ಪಕ್ಷದ ಹಿರಿಯ ಮುಖಂಡ ರಾದ ನಾಗಪ್ಪ ಯಲಗುರದಪ್ಪಗೌಡರ. ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಹಾಲಿ ಬಾದಾಮಿ ಮತಕ್ಷೇತ್ರದ ಶಾಸಕ ಶ್ರೀ ಸಿದ್ದರಾಮಯ್ಯನರು ಸಂತಾಪ ಸೂಚಿಸಿ ನಂತರ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ತಾಲ್ಲೂಕಾ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ನಾಗಪ್ಪ ಯಲಗುರ್ದಪ್ಪ ಗೌಡರರವರ ಅಕಾಲಿಕ ಮರಣದ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಇವರು ನಾನು ಉಪಮುಖ್ಯಮಂತ್ರಿ ಇದ್ದಾಗ ಇವರು ಗುಳೇದಗುಡ್ಡ ಪುರಸಭೆ ಅದ್ಯಕ್ಷರಿದ್ದರು ಅವತ್ತು ಪುರಸಭೆ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಾಗ ಬೇಟಿ ಆಗಿದ್ದರು ಅಂದಿನಿAದ ಇಂದಿನವರೆಗೂ ನನ್ನ ಜೊತೆಗೆ ಒಳ್ಳೆಯ ಸಂಪರ್ಕ ಇಟ್ಟಿದ್ದರು ಇವರಿಂದ ಆ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಬಂದು ಮಿತ್ರರಿಗೆ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: