December 21, 2024

Bhavana Tv

Its Your Channel

ಕೃಷಿ ಸಚಿವರ ಹೆಸರನ್ನು ಮರೆತು ಕೃಷಿ ಇಲಾಖೆಯ ಕಾರ್ಯಕ್ರಮ ಮಾಡಿದ ಅಧಿಕಾರಿಗಳು.

ಸಾವಳಗಿ: ಜಮಖಂಡಿ ತಾಲ್ಲೂಕಿನ ಅತಿದೊಡ್ಡ ಹೋಬಳಿ ಸಾವಳಗಿ, ಈ ಗ್ರಾಮದಲ್ಲಿ ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ರೈತ ಸಂಪರ್ಕ ಕೇಂದ್ರವನ್ನು ಜಮಖಂಡಿಯ ಶಾಸಕರಾದ ಆನಂದ ನ್ಯಾಮಗೌಡ ಅವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಬಿ ಸಿ ಪಾಟೀಲ ಅವರ ಹೆಸರನ್ನು ಮರೆತು ಉದ್ಘಾಟನೆಗೆ ಸಿದ್ದಗೊಳಿಸಿದ ಅಧಿಕಾರಿಗಳು. ಈ ವಿಷಯ ಶಾಸಕರಿಗೆ ತಿಳಿದ ಮೇಲೆ ಸ್ಥಳದಲ್ಲೆ ನಿಂತು ಬೇರೆ ಬ್ಯಾನರ ತಂದು ಆ ಮೇಲೆ ಉದ್ಘಾಟನೆ ಮಾಡಿದ ಪ್ರಸಂಗ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆಯಿತು.
ಅಧಿಕಾರಿಗಳು ಮಾಡಿದ ತಪ್ಪಿಗೆ ಶಾಸಕರ ಮುಜುಗರಕ್ಕೆ ಕಾರಣವಾಯಿತು. ಎನೆ ಇರಲಿ ರಾಜ್ಯ ಸರ್ಕಾರದ ತಮ್ಮ ಇಲಾಖೆಯ ಸಚಿವರನ್ನು ಮರೆತು ಕಾರ್ಯಕ್ರಮ ಮಾಡಲು ಹೊರಟ್ಟಿದ್ದ ಅಧಿಕಾರಿಗಳ ನಡೆ ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.

error: