December 20, 2024

Bhavana Tv

Its Your Channel

ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ರೋಣ: ಪರಕೀಯರನ್ನು ದೇಶದಿಂದ ತೊಲಗಿಸಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು ಸಂಗೊಳ್ಳಿ ರಾಯಣ್ಣ. ಅವರ ಹಾದಿಯಲ್ಲಿ ನಡೆಯುವ ಮೂಲಕ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಎಲ್ಲರೂ ಮುಂದಾಗಬೇಕು ಎಂದು ಮಾಜಿ ಶಾಸಕ ಬಿ. ಆರ್. ಯಾವಗಲ್ ಹೇಳಿದರು.
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಜಾಗೃತಿ ಸಮಿತಿ ವತಿಯಿಂದ ತಾಲ್ಲೂಕಿನ ಬೆಳವಣಕಿ ಗ್ರಾಮದಲ್ಲಿ ಸೋಮವಾರ ನಡೆದ ಸಂಗೋಳ್ಳಿ ರಾಯಣ್ಣ ಪುತ್ಥಳಿ ಅನಾವರಣ, ಸಿದ್ದಾರೂಡರ ೩೨ನೇ ಪುರಾಣ ಮಂಗಲೋತ್ಸವ, ಮಾಜಿ, ಹಾಲಿ ಸೈನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು,
೧೮ನೇ ಶತಮಾನದಲ್ಲೇ ದೇಶದ ನಾಗರಿಕರಲ್ಲಿ ಸ್ವಾತಂತ್ರ‍್ಯ ಹೋರಾಟದ ಕಿಚ್ಚನ್ನು ಹೊತ್ತಿಸಿ ದೇಶಾಭಿಮಾನ ಮೆರೆದ ಶೂರ ಸಂಗೋಳ್ಳಿ ರಾಯಣ್ಣನ ಆದರ್ಶ ಇಂದಿನ ಪೀಳಿಗೆಗೆ ಸ್ಪೂರ್ತಿಯಾಗಿವೆ ಎಂದರು. ಪ್ರತಿಮೆ ನಿರ್ಮಾಣ ಮಾಡಿದರೆ ಸಾಲದು. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂತೆಯೇ ದೇಶಪ್ರೇಮಿಯಾದಾಗ ಮಾತ್ರ ಸಾರ್ಥಕ ಭಾವ ಮೂಡುತ್ತದೆ ಎಂದರು.
ದಾಟನಾಳ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೀಯೇ ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದ ರಾಯಣ್ಣರು ಕೇವಲ ವ್ಯಕ್ತಿಯಾಗಿರದೇ ಸ್ವಾತಂತ್ರ‍್ಯ ಹೋರಾಟದ ಶಕ್ತಿಯಾಗಿದ್ದರು ಎಂದರು. ತಾಯ್ನಾಡಿನ ರಕ್ಷಣೆಗಾಗಿ ಅಸಂಖ್ಯಾತ ಕ್ರಾಂತಿಕಾರಿಗಳನ್ನು ಸಷ್ಟಿಸಿದ ಅಪ್ರತಿಮ ಶೂರನಾಗಿದ್ದನು. ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದ ಸಂಗೊಳ್ಳಿ ರಾಯಣ್ಣ ತಾಯಿ ನೆಲದ ಋಣ ತೀರಿಸಿದ ಕನ್ನಡ ಕಣ್ಮಣಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುಂಭಮೇಳ, ಡೊಳ್ಳಿನ ಮೇಳದೊಂದಿಗೆ ಬೆಳವಣಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಸಭೆಯಲ್ಲಿ ಮಾಜಿ ಮತ್ತು ಹಾಲಿ ಸೈನಿಕರ ಸನ್ಮಾನ ಹಾಗೂ ಕರ್ನಾಟಕ ಪ್ರಾದೇಶಿಕ ಕುರುಬರ ಸಂಘದ ಪದಾಧಿಕಾರಿಗಳ ಸನ್ಮಾನ ನಡೆಯಿತು.
ಅಸೂಟಿಯ ಶಾಂತಿಧಾಮ ದಿವಾನ ಶರೀಫ ಶಿವಯೋಗಿ ಮುರುಘರಾಜೇಂದ್ರ ಕುರುಣೇಶ್ವರ ಸ್ವಾಮೀಜಿ, ತಾಲ್ಲೂಕಾ ಕರ್ನಾಟಕ ಪ್ರಾದೇಶಿಕ ಕುರುಬರ ಸಂಘದ ಕಾರ್ಯಾಧ್ಯಕ್ಷ ಈರಪ್ಪ ತಾಳಿ, ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ, ನಿಕಿತರಾಜ ಮೌರ್ಯ, ರಾಜೇಶ್ವರಿ ತೋಟದ, ಯಲ್ಲಪ್ಪ ತಾಳಿ, ಹನಮಂತಪ್ಪ ಹೊಸೂರು, ಕಳಕಪ್ಪ ಕೊಣ್ಣೂರ, ಸುರೇಶ ಹುಡೇದ, ಮುತ್ತಪ್ಪ ಕುರಿ, ಮಹೇಶ ಬಿಂಗಿ, ಬಸಪ್ಪ ಬೆಳವಣಕಿ, ಮುತ್ತು ಎಚ್. ನಂದಿ ಇದ್ದರು.

ವರದಿ ವೀರಣ್ಣ ಸಂಗಳದ

error: