December 20, 2024

Bhavana Tv

Its Your Channel

ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾದ ಬೆನ್ನಲ್ಲೇ ಎಚ್ಚೆತ್ತ ಪುರಸಭೆ, ರಾಜ ಕಾಲುವೆಯ ಹೂಳೆತ್ತುವ ಕಾರ್ಯ ಆರಂಭ

ಮಳವಳ್ಳಿ : ಮಳವಳ್ಳಿ ಪಟ್ಟಣದ ಮೈಸೂರು ರಸ್ತೆ ಹಾಗೂ ಪೇಟೆ ಬೀದಿಯುದ್ದಕ್ಕೂ ಇರುವ ರಾಜ ಕಾಲುವೆಯ ಹೂಳು ತೆಗೆಯುವ ಕಾರ್ಯಾಚರಣೆಯನ್ನು ಪುರಸಭೆ ಕೈಗೆತ್ತಿಕೊಂಡಿದ್ದು ಕಳೆದ ಮೂರ್ನಾಲ್ಕು ದಿನದಿಂದ ಈ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಇತ್ತೀಚೆಗೆ ಪಟ್ಟಣದಲ್ಲಿ ಭಾರಿ ಮಳೆ ಸುರಿದ ವೇಳೆ ಚರಂಡಿ ತುಂಬ ಹೂಳು ತುಂಬಿಕೊAಡಿದ್ದ ಪರಿಣಾಮ ರಸ್ತೆಯಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿದು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದ್ದರ ಜೊತೆಗೆ ವ್ಯಾಪಾರಿಗಳಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿತ್ತು.
ಇದರ ಜೊತೆಗೆ ಭಾರಿ ಪ್ರಮಾಣದ ನೀರು ತಗ್ಗು ಪ್ರದೇಶವಾದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣಕ್ಕೆ ನುಗ್ಗಿದ ಪರಿಣಾಮ ಇಡೀ ಶಾಲಾ ಆವರಣ ಕೆರೆಯಂತಾಗಿ ಹೋಗಿತ್ತು.


ಈ ಕುರಿತು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾದ ಬೆನ್ನಲ್ಲೇ ಎಚ್ಚೆತ್ತ ಪುರಸಭೆಯವರು ರಾಜ ಕಾಲುವೆಯ ಹೂಳೆತ್ತುವ ಕಾರ್ಯಾ ಆರಂಭಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಪೇಟೆ ಬೀದಿಯ ಹೂಳೆತ್ತುವ ಕಾರ್ಯ ನಡೆಸಿದ ಪುರಸಭೆಯ ಸಿಬ್ಬಂದಿ ಇಂದು ಮೈಸೂರು ರಸ್ತೆಯ ದಯಾನಂದ ಕ್ಲಿನಿಕ್ ಮುಂಭಾಗದಿoದ ರಾಜ ಕಾಲುವೆ ಹೂಳೆತ್ತುವ ಕಾರ್ಯಾಚರಣೆಯನ್ನು ಜೆಸಿಬಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಟಿ ನಂದಕುಮಾರ್ ಅವರು ಪ್ರತೀ ಭಾರಿ ಮಳೆ ಬಂದಾಗಲೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದ್ದು ವ್ಯಾಪಾರಿಗಳು ಸಾರ್ವಜನಿಕರು ಪುರಸಭೆಯವರತ್ತ ಬೊಟ್ಟು ಮಾಡುವಂತಾಗಿತ್ತು.ಇದನ್ನು ಗಮನಿಸಿದ ಶಾಸಕರು ರಾಜಕಾಲುವೆಯನ್ನು ತಕ್ಷಣ ಹೂಳು ತೆಗೆಸುವಂತೆ ನೀಡಿದ ಆದೇಶದಂತೆ ಹೂಳು ತೆಗೆಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಇನ್ನೂ ೩-೪ ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದ್ದು ವ್ಯಾಪಾರಸ್ಥರು, ಸಾರ್ವಜನಿ ಕರು ಪುರಸಭೆಯ ಜೊತೆಗೆ ಸಹಕರಿಸ ಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ಸದಸ್ಯರಾದ ನೂರುಲ್ಲಾ, ಸಿದ್ದರಾಜು, ಮತ್ತಿತರರು ಸ್ಥಳದಲ್ಲೇ ಹಾಜರಿದ್ದು ಕಾರ್ಯಾಚರಣೆ ಉಸ್ತುವಾರಿ ನಡೆಸಿದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: