ಮಳವಳ್ಳಿ : ಇಂಜಿನಿಯರ್ಸ್ ಡೇ ದಿನದ ಅಂಗವಾಗಿ ಪುರಸಭೆಯ ವತಿಯಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾದ ಪುಟ್ಟಸ್ವಾಮಿ, ಪುರಸಭೆಯ ಅಭಿಯಂತರರಾದ ಪುಟ್ಟಯ್ಯ ಅವರುಗಳನ್ನು ಪುರಸಭೆ ವತಿಯಿಂದ ಸನ್ಮಾನಿಸಲಾಯಿತು.
ಪುರಸಭೆಯ ಕಚೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಟಿ ನಂದಕುಮಾರ್ ಪುರಸಭೆ ಪರವಾಗಿ ಈ ಇಬ್ಬರು ಅಭಿಯಂತರರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಂದಕುಮಾರ್ ತಮ್ಮ ಅದ್ಬುತ ಪ್ರತಿಭೆ ಹಾಗೂ ಕೌಶಲ್ಯ ಯುತ ಕಾರ್ಯ ಸಾಧನೆ ಮೂಲಕ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದು ಅವರ ಸಾಧನೆ ಮಾರ್ಗದರ್ಶನ ನಮಗೆಲ್ಲ ಮಾದರಿಯಾಗಿದೆ ಎಂದು ತಿಳಿಸಿದರು.
ಅವರ ಆಶಯದಂತೆ ಅವರ ಜನ್ಮ ದಿನವನ್ನು ಇಂಜಿನಿಯರ್ಸ್ ಡೇ ಆಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎಇಇ ಪುಟ್ಟಸ್ವಾಮಿ ಹಾಗೂ ಪುರಸಭೆಯ ಇಂಜಿನಿಯರ್ ಪುಟ್ಟಯ್ಯ ರವರನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ ಮಾತನಾಡಿ ವಿಶ್ವೇಶ್ವರಯ್ಯನವರ ತಾಂತ್ರಿಕ ಕೌಶಲ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಶ್ರಮದ ಫಲವಾಗಿ ಕೆ ಆರ್ ಎಸ್ ಅಣೆಕಟ್ಟೆಯಂತಯ ಹಲವಾರು ಬೃಹತ್ ಅಣೆಕಟ್ಟೆಗಳು ನಿರ್ಮಾಣದ ಜೊತೆಗೆ ಹಲವಾರು ಬೃಹತ್ ಕೈಗಾರಿಕೆಗಳು ತಲೆ ಎತ್ತಿದ್ದು ಕರ್ನಾಟಕದ ಅಭಿವೃದ್ಧಿಗೆ ಸರ್ ಎಂ ವಿ ಅವರ ಕೊಡುಗೆ ಅಪಾರ ವಾದದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಇಇ ಪುಟ್ಟಸ್ವಾಮಿ ಅವರು ಪಟ್ಟಣ ಹಾಗೂ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿಯಾಗಿದ್ದು ಇದೇ ಹಿನ್ನೆಲೆಯಲ್ಲಿ ಸರ್ಕಾರದ ಹಲವಾರು ಯೋಜನೆಗಳ ರೂಪುರೇಷೆ ಯಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುತ್ತಿದ್ದು ನಮ್ಮ ಈ ಕಾರ್ಯ ಕ್ಕೆ ಎಲ್ಲಾ ಜನಪ್ರತಿನಿಧಿಗಳು ಕೈ ಜೋಡಿಸಿ ಸಹಕಾರಿಸಬೇಕೆಂದು ಕೋರಿದರು.
ಪುರಸಭೆಯ ಮುಖ್ಯಾಧಿಕಾರಿ ಪವನ್ ಕುಮಾರ್, ಸದಸ್ಯರಾದ ನೂರುಲ್ಲಾ, ಸಿದ್ದರಾಜು, ಶಿವು, ಮುಖಂಡರಾದ ಪೊತಂಡೆ ನಾಗರಾಜು, ಅಂಕನಾಥ್, ಸಫೀಉಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ