December 22, 2024

Bhavana Tv

Its Your Channel

ಸದೃಢ ಯುವಕರಿಂದ ಉತ್ತಮ ಸಮಾಜ ನಿರ್ಮಾಣ- ತಹಶೀಲ್ದಾರ ಜೆ.ಬಿ. ಜಕ್ಕನಗೌಡ್ರ

ರೋಣ: ಸ್ವಸ್ಥ ಹಾಗೂ ಸಧೃಢ ಯುವಕರು ತಮ್ಮ ಉತ್ಸಾಹ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ತಹಶೀಲ್ದಾರ ಜೆ.ಬಿ. ಜಕ್ಕನಗೌಡ್ರ ಹೇಳಿದರು.

ರೋಣ ಪಟ್ಟಣದಲ್ಲಿ ಸಿದ್ದಾರೂಢ ಮಠದ ಹತ್ತಿರ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರದಾದ್ಯಂತ ಯುವಕರು ಉತ್ತಮ ಆರೋಗ್ಯ ಮತ್ತು ದೇಶಭಕ್ತಿ ಬೆಳೆಸಿಕೊಳ್ಳಬೇಕೆಂದು ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದೆ. ಯುವಕರಲ್ಲಿ ರಾಷ್ಟ್ರಭಕ್ತಿ, ಐಕ್ಯತೆ ಮತ್ತು ಸೌಹಾರ್ಧತಾ ಮನೋಭಾವವನ್ನು ಮೂಡಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ ಬೂದಿಹಾಳ, ಆರೋಗ್ಯ ಶಿಕ್ಷಣಾಧಿಕಾರಿ ಕಳಕೇಶ ಹಾದಿಮನಿ ಇದ್ದರು.
ವರದಿ ವೀರಣ್ಣ ಸಂಗಳದ ರೋಣ

error: