December 21, 2024

Bhavana Tv

Its Your Channel

ದಲಿತ ನೌಕರನ ಮೇಲೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ

ಸಾವಳಗಿ: ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಭಾಷಣ ಮಾಡುವಾಗ ದಲಿತ ಸಮುದಾಯಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ.

ಈ ಪದ ಬಳಕೆ ಮಾಡಿದ ವ್ಯಕ್ತಿಯ ವಿರುದ್ದ ಸಾವಳಗಿಯ ದಲಿತ ಸಂಘಟನೆಗಳ ಒಕ್ಕೂಟದ ಪರವಾಗಿ ಮಾನ್ಯ ಉಪ ತಹಶಿಲ್ದಾರರ ಮುಖಾಂತರ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಸಿದ್ದು ಬಂಡಿವಡ್ಡರ ಹೋರಾಟ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಪ್ರತಿಯೊಬ್ಬ ಪ್ರಜೇಯ ಸಂವಿಧಾನ ಬದ್ದ ಹಕ್ಕು, ಆದರೆ ಹೋರಾಟ ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಯಾವುದೇ ಗಣ್ಯವ್ಯಕ್ತಿಗಳಿಗೆ ಅವಮಾನ ಆಗದಂತೆ ಮತ್ತು ಯಾವುದೇ ಬೇರೆ ಸಮುದಾಯಕ್ಕೆ ಅವಮಾನವಾಗದಂತೆ ಭಾಷಣ ಮಾಡಬೇಕು ಆದರೆ ಮಂಗಳವಾರ ಜಮಖಂಡಿ ನಗರದಲ್ಲಿ ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಉಮೇಶ ಆಲಮೇಲಕರ ಎಂಬ ವ್ಯಕ್ತಿ ಭಾಷಣ ಮಾಡುವಾಗ ದಲಿತರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ಇದು ಇಡಿ ದಲಿತ ಸಮುದಾಯಕ್ಕೆ ಅವಮಾನ ಮಾಡುವಂತ ಘಟನೆಯಾಗಿದೆ, ಇಂತಹ ಶಾಂತಿ ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಗೆ ಕಾರಣವಾಗುತ್ತವೆ. ಆದಕಾರಣ ಆಕ್ಷೇಪಾರ್ಹ ಪದಗಳನ್ನು ಬಳಸಿ ಭಾಷಣ ಮಾಡಿದವನ ಮೇಲೆ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಒಂದು ವೇಳೆ ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಾಗರ ಕಾಂಬಳೆ, ರಾಹುಲ ಹಾದಿಮನಿ,ಸತೀಶ ತೀಕೂಟಾ, ಪ್ರವೀಣ ಮೇಲಿನಕೇರಿ, ಅಜೀತ ಮಾನೆ, ಸೇರಿದಂತೆ ಅನೇಕರು ಇದ್ದರು.

ವರದಿ:ಕಿರಣ ಸೂರಗೂಂಡ ಸಾವಳಗಿ

error: