December 21, 2024

Bhavana Tv

Its Your Channel

ವಿವಿಧ ಸಂಘಟನೆಗಳಿOದ ರೈತ ವಿರೋಧಿ ಕಾಯ್ದೆ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

ಸಾವಳಗಿ: ಪಟ್ಟಣದ ಬಸ ಸ್ಟ್ಯಾಂಡ ವೃತ್ತದಲ್ಲಿ ಭಾರತ ಬಂದಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘ,ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ), ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಹಸಿರು ಸೇನೆ ,ಆಟೋ ಮಾಲಿಕರು ಚಾಲಕರ ಸಂಘ,ಕೂಲಿ ಕಾರ್ಮಿಕರ ಬೆಂಬಲದೊAದಿಗೆ ಭಾರತ ಬಂದ್ ಕರೆಗೆ ಓಗೊಟ್ಟು ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ತಕ್ಷಣ ಕೈ ಬಿಡುವಂತೆ ಒತ್ತಾಯಿಸಿ ಸಾವಳಗಿಯಲ್ಲಿ ವಿವಿಧ ಸಂಘಟನೆಗಳು ಸೇರಿಕೊಂಡು ಮಾನವ ಸರಪಳಿ ನಿರ್ಮಿಸಿ ಶಾಂತಿಯುತ ಪ್ರತಿಭಟನೆ ಮಾಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪುಲಕೇಶಿ ನಾಂದ್ರೆಕರ ಈ ಸರ್ಕಾರಗಳು ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಮತ್ತು ಜನಸಾಮಾನ್ಯರಿಗೆ ಮಾರಕವಾಗಿವೆ, ರೈತರು ಮತ್ತು ಜನಸಾಮಾನ್ಯರನ್ನು ಬದುಕಲು ಈ ಸರ್ಕಾರಗಳು ಬೀಡುತ್ತಿಲ್ಲ ಕೂಡಲೇ ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ನಮ್ಮ ಜೀವ ಇರೂವರೆಗು ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಶಿವಲಿಲಾ ಲಿಗಾಡೆ ರೈತರ ಹೋರಾಟ ಇವತ್ತು ಶಾಂತಿಯುತವಾಗಿ ನಡೆಯುತ್ತಿದೆ ಇಂತಹ ಸಮಯದಲ್ಲಿ ಸರ್ಕಾರಗಳು ಎಚ್ಚೆತುಕೊಳ್ಳದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರವಾದ ಹೋರಾಟ ಮಾಡುವುದು ನಮಗೆ ಅನಿವಾರ್ಯ ಆಗುತ್ತದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ನಮ್ಮ ದೇಶದ ಬೆನ್ನೆಲುಬು ಎಂದು ಹೇಳಿ ಇವತ್ತು ಅದೇ ರೈತನನ್ನು ತುಳಿಯುವ ಪ್ರಯತ್ನ ಮಾಡುತ್ತಿವೆ ಎಂದರು.
ಪ್ರತಿಭಟನೆ ವೇಳೆಯಲ್ಲಿ ಉಪ ತಹಶಿಲ್ದಾರ ಎ ಕೆ ಇಂಡಿಕರ ಅವರಿಗೆ ಮನವಿ ನೀಡಿದರು ಈ ಸಂಧರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಶಿಂಧೆ, ಭೀಮಶಿ ಕೋಟ್ಯಾಳ,ರಾಜುಗೌಡ ನ್ಯಾಮಗೌಡ, ಜ್ಯೋತಿ ಗರಸಂಗಿ, ಪ್ರೇಮಾ ಹಿರೇಕುರಬರ ಸೇರಿದಂತೆ ಅನೇಕರು ಇದ್ದರು.

ವರದಿ ಕಿರಣ ಸೂರಗೂಂಡ ಸಾವಳಗಿ

error: