December 22, 2024

Bhavana Tv

Its Your Channel

ಮೂರು ದಿನದ ಬಳಿಕ ಮಗುವಿನ ಮೃತದೇಹ ಪತ್ತೆ

ಹೊಳೆಆಲೂರ(ರೋಣ): ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಹಿಳೆಯೊಬ್ಬರು ಮನನೊಂದು ತನ್ನ ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ. ೨೯ಕ್ಕೆ ನಡೆದಿತ್ತು. ಅಂದು ಮಹಿಳೆ ಜೀವಂತ ಪತ್ತೆಯಾಗಿದ್ದಳು ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ನಿರಂತರ ಶೋಧ ಕಾರ್ಯಾಚರಣೆಯಿಂದ ಮಗುವಿನ ಮೃತದೇಹ ನದಿಯಲ್ಲಿ ಮೂರು ದಿನದ ಬಳಿಕ ಪತ್ತೆಯಾಗಿದೆ.
ಹರಿಯುವ ನೀರಿಗೆ ತೇಲುತ್ತಾ ಹೋದ ಮಹಿಳೆಯು ಸೇತುವೆಯಿಂದ ೨.೫ಕಿಮೀ ದೂರದಲ್ಲಿ ಮುಳ್ಳಿನ ಕಂಟಿಯ ಗಿಡದಲ್ಲಿ ಸಿಕ್ಕಿಕೊಂಡಿದ್ದಳು. ಅಲ್ಲಿಂದ ೧ಕಿಮೀ ದೂರದ ಕಂಟಿಯಲ್ಲಿ (ಕುರವಿನಕೊಪ್ಪ ಸಮೀಪದಲ್ಲಿ) ಮಗುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ನೀರಿನ ಪ್ರಮಾಣ ಕಡಿಮೆಯಾದ ಕಾರಣ ಶೋಧ ಕಾರ್ಯಕ್ಕೆ ಅನುಕೂಲವಾಯಿತು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವೀನ ಎಸ್. ಕಗ್ಗಲಗೌಡ್ರ ಮಾಹಿತಿ ನೀಡಿದರು.

ವರದಿ ವೀರಣ್ಣ ಸಂಗಳ

error: