ಇಂಡಿ ತಾಲೂಕ ಸಮಗ್ರ ನೀರಾವರಿಗಾಗಿ ಆಗ್ರಹಿಸಿ ೩೪ನೇ ದಿನದ ಪ್ರಯುಕ್ತ ಇಂಡಿ ರೈಲು ನಿಲ್ದಾಣದಲ್ಲಿ ಬಿ.ಡಿ.ಪಾಟೀಲರ ನೇತೃತ್ವಲ್ಲಿ ಸೊಲ್ಲಾಪುರ ದಿಂದ ಮೈಸೂರು ಹೋಗುವ ಗೊಲಗುಂಬಜ್ ಎಕ್ಸ್ ಪ್ರೆಸ್ ರೈಲನ್ನು ತಡೆದು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಸಮಗ್ರ ಇಂಡಿ ತಾಲೂಕಾ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಇಂದು ೩೪ ನೆಯ ದಿನದ ಹೋರಾಟ ಇಂಡಿ ರೈಲು ನಿಲ್ದಾಣದಲ್ಲಿ ಗೋಲಗುಮ್ಮಟ ಎಕ್ಸಪ್ರೇಸ್ ರೈಲು ನಿಲ್ಲಿಸಿ ಸ್ಟೇಷನ್ ಮಾಸ್ಟರ್ ಮುಂಖಾAತರ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡುತ್ತಾ ೩೪ದಿನಗಳ ನಿರಂತರವಾಗಿ ಧರಣಿ ಸತ್ಯಾಗ್ರಹ ಹಮ್ಮಿಕೋಂಡರು ನಾನಾ ರೀತಿಯಲ್ಲಿ ಹೋರಾಟಗಳನ್ನು ಮಾಡಿದರು ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಲು ಜಾಣಕುರಡತನ ಪ್ರದರ್ಶನ ಮಾಡುತಿದೆ, ಸರಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲಾ ಎಂಬುದು ಕಂಡುಬರುತ್ತಿದೆ, ಮುಂದಿನ ದಿನಗಳಲ್ಲಿ ರೈತರ ಶಾಪ್ ತಟ್ಟುತ್ತದೆ ಎಂದು ಮಾತನಾಡಿದರು.
ಮಾಜಿ ವಿಧಾನಪರಿಷತ್ ಸದಸ್ಯ ಬಿ ಜಿ ಪಾಟೀಲರು ಮಾತನಾಡುತ್ತಾ ಇಂತಾ ಕುಂಭಕರ್ಣ ನಿದ್ದೆ ಸರ್ಕಾರ ನನ್ನ ಜೀವನದಲ್ಲಿ ಕಂಡಿಲ್ಲ, ಬಡ ಹೋರಾಟಗರನ ರೈತಪರ ಧ್ವನಿ ಆಳುವ ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಮಾತನಾಡಿದರು. ಶ್ರೀಶೈಲಗೌಡ ಪಾಟೀಲ, ಮರಪ್ಪ ಗಿರಣಿ ವಡ್ಡರ, ಮಂಜುನಾಥ ಕಾಮಗೋಂಡ ಮಾತನಾಡಿದರು.
ಹೋರಾಟದಲ್ಲಿ ಸಿದ್ದು ಡಂಗಾ. ಸಿದ್ದಪ್ಪ ಗುನ್ನಾಪೂರ, ಬೀರೇಶ ನಿಂಬಾಳ, ಬಾಳು ರಾಠೋಡ, ಈರಣ್ಣ ಮುಜಗೋಂಡ, ಯಶವಂತ್ ಕಾಡೆಗೋಳ, ಮಹಿಬೂಬ ಬೇವನೂರ, ಪೀರೋಜ ಶೇಖ, ಬಸವರಾಜ ಹಂಜಗಿ, ನಿಯಾಝ್ ಅಗರಖೇಡ, ಫಜಲುಲ್ಲಾ ಮುಲ್ಲಾ, ದುಂಡು ಬಿರಾದಾರ, ಲಕ್ಷ್ಮಣ ಪೂಜಾರಿ, ಸಂತೋಷ ಬಿರಾದಾರ, ರವಿ ಶಿಂಧೆ, ಸಂತೋಷ ರಾಠೋಡ, ಕುಮಾರ್ ಸುರ್ಗಹಳ್ಳಿ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಬಿ ಎಸ್ ಹೊಸೂರ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ