December 22, 2024

Bhavana Tv

Its Your Channel

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ತಾಲ್ಲೂಕು ಘಟಕದ ಸದಸ್ಯರಿಂದ ಪ್ರತಿಭಟನೆ

ಮಳವಳ್ಳಿ: ಕರ್ನಾಟಕ ಭೂ ಮಂಜೂರಾತಿ ಕಾಯಿದೆ-೧೯೬೪ ಜಾರಿಗಾಗಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ತಾಲ್ಲೂಕು ಘಟಕದ ಸದಸ್ಯರು ಗುರುವಾರ ಮಳವಳ್ಳಿ ಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ನೂರಾರು ಮಂದಿ ರೈತರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಹೋರಾಟ ಸಮಿತಿಯ ರಾಜ್ಯ ಘಟಕದ ಸಂಚಾಲಕ ಪಿ.ಜೆ.ಗೋವಿಂದರಾಜು ಮಾತನಾಡಿ, ಸ್ವಾತಂತ್ರ‍್ಯ ಬಂದು ಏಳು ದಶಕಗಳ ಕಳೆದರೂ ಸಂವಿಧಾನಾತ್ಮಕ ಹಕ್ಕುಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಇನ್ನೂ ದೊರೆತಿಲ್ಲ. ತಾಲ್ಲೂಕಿನ ಧನಗೂರು, ಹಲಸಹಳ್ಳಿ ಗ್ರಾಮದ ಸರ್ವೆ ನಂ.೮೮, ೯೩, ೨೯೯ರಲ್ಲಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು, ಸಮಿತಿಗೆ ಒಪ್ಪಸದೇ ವಿಶೇಷ ಪ್ರಕರಣ ಎಂದು ಪರಿಗಣಿಸಿ ಅರ್ಜಿದಾರರೆಲ್ಲರಿಗೂ ಉಳುಮೆ ಚೀಟಿ ನೀಡಬೇಕು. ಎಲ್ಲ ಗ್ರಾಮಗಳಲ್ಲೂ ಅರ್ಜಿ ಸಲ್ಲಿಸಿರುವ ಭೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭೂ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಘಟಕದ ಸಂಚಾಲಕ ಎಚ್.ಎನ್.ವೀರಭದ್ರಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ತೋಟ, ತಳವಾರ, ನೀರಗಂಟಿಗಳಿಗೆ ರೀ ಗ್ರ‍್ಯಾಂಟ್ ಆಗದಿರುವ ಭೂಮಿಗಳನ್ನು ಕೂಡಲೇ ಮಂಜೂರಾತಿ ಮಾಡಬೇಕು. ಮಳವಳ್ಳಿ ಮೀಸಲು ಕ್ಷೇತ್ರವಾಗಿರುವು ದರಿಂದ ಬೌದ್ದರೇ ಹೆಚ್ಚು ವಾಸವಾಗಿದ್ದು, ಪಟ್ಟಣಕ್ಕೆ ಹೊಂದುಕೊAಡAತೆ ಇರುವ ಎಪಿಎಂಸಿ ಜಾಗದಲ್ಲಿ ಬೌದ್ದವಿಹಾರಕ್ಕೆ ಕಾಯ್ದಿರಿಸಿ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ೩ರಿಂದ ೫ ಎಕರೆ ಜಮೀನು ನೀಡಬೇಕು. ತಾಲ್ಲೂಕು ಕಚೇರಿಯಲ್ಲಿ ಎಲ್‌ಎನ್ಡಿ ಗುಮಾಸ್ತರಾಗಿ ೧೦-೧೫ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಭರತ್ ಅರ್ಜಿದಾರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಕೂಡಲೇ ನಾಗರೀಕ ಕಾಯಿದೆ ಪ್ರಕಾರ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ವಿಜಯಣ್ಣ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಬಸವರಾಜು, ಅನಂತ್ ಕುಮಾರ್, ರಾಜೇಂದ್ರ, ಸಿದ್ದಲಿಂಗಮೂರ್ತಿ, ಮುದ್ರರಾಜು, ಗೋವಿಂದಯ್ಯ, ಉಮೇಶ್, ಮರಿಸ್ವಾಮಿ, ಅನ್ನದಾನಯ್ಯ, ಕೆಂಪಯ್ಯ, ಅಪ್ಪಯ್ಯ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: