May 19, 2024

Bhavana Tv

Its Your Channel

ಕೋವಿಡ್ ಎರಡನೇ ಲಸಿಕೆ ಮೇಳಕ್ಕೆ ಚಾಲನೆ

ಮಂಡ್ಯ ತಾವರಗೆರೆ ಒಂದನೇ ಅಂಗನವಾಡಿ ಕೇಂದ್ರ ೨೭ನೇ ವಾರ್ಡ್ನಲ್ಲಿ ಕೋವಿಡ್ ಉಚಿತ ಎರಡನೇ ಲಸಿಕೆ ಮೇಳಕ್ಕೆ ನಗರಸಭಾ ಸದಸ್ಯರಾದ ಸೌಭಾಗ್ಯ ಶಿವಲಿಂಗು ಪತ್ರಕರ್ತ ಎಂ ಲೋಕೇಶ, ವಕೀಲ ಎಂ ಗುರುಪ್ರಸಾದ್ ಮತ್ತು ವೈದ್ಯಾಧಿಕಾರಿಗಳಾದ ಡಾಕ್ಟರ್ ಮನೀಶ್ ಮತ್ತು ಭಾಸ್ಕರ್ ಇವರುಗಳು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ನಗರಸಭಾ ಸದಸ್ಯರಾದ ಸೌಭಾಗ್ಯ ಶಿವಲಿಂಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಸಿಕೆಗಳ ಬಗ್ಗೆ ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಸಾರ್ವಜನಿಕರಿಗೆ ತಲುಪಿಸುತ್ತಿದೆ ಅದನ್ನು ಸದ್ಬಳಕೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪತ್ರಕರ್ತ ಎಂ ಲೋಕೇಶ್ ಮಾತನಾಡಿ ಲಸಿಕಾ ಮೇಳವು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಎರಡನೇ ಮೇಳಕ್ಕೆ ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಜನರು ಸಹ ಸ್ಪಂದಿಸುತ್ತಿದ್ದು ಕೋವಿಡ್ ಲಸಿಕಾ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆದು ಆರೋಗ್ಯವಂತರಾಗಬೇಕೆAದುರು ಮತ್ತು ರಾಜ್ಯದಲ್ಲಿ ಲಸಿಕಾ ಯಶಸ್ವಿಯಾಗಿದ್ದು ಆರೋಗ್ಯ ಇಲಾಖೆಯ ಮಂತ್ರಿಯವರಿಗೆ ಪ್ರಶಸ್ತಿಯು ಸಹ ದೊರಕಿದೆ ಅದರಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಆರೋಗ್ಯವಾಗಿರಿ ಎಂದು ತಿಳಿಸಿ ಎಲ್ಲರೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಹಕಾರವನ್ನು ನೀಡಬೇಕೆಂದು ತಿಳಿಸಿದರು.
ವಕೀಲ ಎಂ ಗುರುಪ್ರಸಾದ್ ಮಾತನಾಡಿ ಈಗಾಗಲೇ ಲಸಿಕಾ ಮೇಳವು ಬಹಳ ಯಶಸ್ವಿಯಾಗಿ ನಡೆಯುತ್ತಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಬೇಕೆಂದು ಮನವಿ ಮಾಡಿದರು ಮತ್ತು ಸದೃಢ ಸಮಾಜಕ್ಕೆ ಸಾರ್ವಜನಿಕರು ಸ್ಪಂದಿಸಿ ಉಚಿತ ಲಸಿಕೆಯನ್ನು ಪಡೆದುಕೊಳ್ಳಬೇಕೆಂದರು. ಲಸಿಕೆ ಬಗ್ಗೆ ಮತ್ತು ಕಾನೂನು ಅರಿವು ಬಗ್ಗೆ ತಿಳಿಸಿದರು. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳಿಸಿದರು
ಇದೇ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾಕ್ಟರ್ ಮನೀಶ್ ಮತ್ತು ಭಾಸ್ಕರ್ ಮಾತನಾಡಿ ಕೋವಿಡ್ ಲಸಿಕೆಯ ರಾಜ್ಯಾದ್ಯಂತ ನಡೆಯುತ್ತಿದೆ ಆದರೆ ಅಂಕಿ-ಅAಶಗಳ ಪ್ರಕಾರ ಇನ್ನೂ ಹೆಚ್ಚು ಲಸಿಕೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಮತ್ತು ಎಲ್ಲರೂ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಕೋವಿಡ್ ವೈರಾಣು ಇನ್ನೂ ದೂರಆಗಿಲ್ಲ ಆದ್ದರಿಂದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ನರ್ಸಿಂಗ್ ಆಫೀಸರ್ ಗಳಾದ ಜಯಲಕ್ಷ್ಮಿ ಮುರುಗೇಶ್ ಸಂಧ್ಯಾ ಆಶಾ ಕಾರ್ಯಕರ್ತೆ ವನಿತಾ ಗೌಡ ಅಂಗನವಾಡಿ ಕಾರ್ಯಕರ್ತರಾದ ಪರ್ಯಾನ ಬೇಗಂ ಸೌಭಾಗ್ಯ ಶಿವಲಿಂಗ ಎಂ ಲೋಕೇಶ್ ಎಂ ಗುರುಪ್ರಸಾದ್ ಪ್ರವೀಣ್ ಮತ್ತು ೨೭ನೇ ವಾರ್ಡಿನ ಸಾರ್ವಜನಿಕರು ಭಾಗವಹಿಸಿದರು
ವರದಿ: ಲೋಕೇಶ ಮಳವಳ್ಳಿ

error: