May 19, 2024

Bhavana Tv

Its Your Channel

ಹುಚ್ಚುನಾಯಿ ದಾಳಿಗೆ ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ

ಮಳವಳ್ಳಿ : ಹುಚ್ಚು ನಾಯಿಯೊಂದು ಕಂಡ ಕಂಡವರ ಮೇಲೆ ದಾಳಿ ಮಾಡುತ್ತ ಹತ್ತಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸುವ ಮೂಲಕ ನಾಲ್ಕೈದು ಗ್ರಾಮಗಳ ಜನರಲ್ಲಿ ಭೀತಿ ಹುಟ್ಟಿಸಿರುವ ಪ್ರಸಂಗವೊAದು ವರದಿಯಾಗಿದೆ.
ತಾಲ್ಲೂಕಿನ ಮಲ್ಲಿನಾಥಪುರ ಹಾಗೂ ಸುತ್ತಲಿನ ಕಲ್ಯಾಣಿ ಕೊಪ್ಪಲು, ಮಲ್ಲಿಗೆಹಳ್ಳಿ ನಾರಾಯಣ ಪುರ ಗ್ರಾಮಗಳಲ್ಲಿ ಈ ಹುಚ್ಚು ನಾಯಿಗಳ ಹಾವಳಿಗೆ ಜನ ತತ್ತರಿಸಿ ಹೋಗಿದ್ದು ಇಂದು ಬೆಳಿಗ್ಗೆಯಿಂದೀಚೆಗೆ ೧೦ ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ ಎಂದು ವರದಿಯಾಗಿದೆ.
ಮಲ್ಲಿನಾಥಪುರ ಗ್ರಾಮದಲ್ಲಿ ಹೆಚ್ಚಾಗಿ ಓಡಾಡುತ್ತಿರುವ ಈ ನಾಯಿ ಈ ಗ್ರಾಮದ ೫-೬ ಮಂದಿಯನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದು ಇದರ ಜೊತೆಗೆ ಕಲ್ಯಾಣಿ ಕೊಪ್ಪಲು, ನಾರಾಯಣಪುರ ಗ್ರಾಮದ ತಲಾ ಒಬ್ಬೊಬ್ಬರನ್ನು ಕಚ್ಚಿ ಗಾಯಗೊಳಿಸಿದ್ದು ಈ ಎಲ್ಲಾ ಗಾಯಾಳುಗಳನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾ ಯಿತಾದರೂ ಆಸ್ಪತ್ರೆಯಲ್ಲಿ ಹುಚ್ಚು ನಾಯಿ ಕಡಿತದ ಇಂಜೆಕ್ಷನ್ ಇಲ್ಲದ ಕಾರಣ ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಮಳವಳ್ಳಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಯಿಂದ ಜನ ತತ್ತರಿಸತ್ತಿದ್ದು ಮುಂದೊAದು ದಿನ ನಾಯಿಗಳ ದಾಳಿ ಬಾರಿ ಅಪಾಯವನ್ನು ತಂದೊಡ್ಡುವ ಕುರಿತು ಭಾವನ ಟಿವಿಯಲ್ಲಿ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ನಾಯಿಯ ಅಪಾಯಕಾರಿ ದಾಳಿಗೆ ಈಗ ಜನ ನಲುಗುವ ಸ್ಥಿತಿ ಆರಂಭ ವಾಗಿದೆ.
ಗ್ರಾಮದ ಹೊರವಲಯದ ರಸ್ತೆ ಬದಿಯಲ್ಲಿ ಅವಿತು ಕುಳಿತಿರುವ ಈ ಹುಚ್ಚು ನಾಯಿ ಒಂಟಿಯಾಗಿ ನಡೆದು ಹೋಗುವ ಜನರು ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿದ್ದು ಅದರಲ್ಲೂ ಬೈಕ್ ನಷ್ಟೇ ವೇಗದಲ್ಲಿ ಬಂದು ದಾಳಿ ಮಾಡುತ್ತಿರುವ ನಾಯಿಯ ದಾಳಿಗೆ ಬೈಕ್ ಸವಾರರು ತತ್ತರಿಸಿ ಹೋಗಿದ್ದು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ನಾಯಿ ಹಾವಳಿಯಿಂದ ಭಯಭೀತ ರಾಗಿರುವ ಜನ ಮನೆಯಿಂದ ಹೊರಬರಲು ಭಯ ಪಡುತ್ತಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿರುವ ಪೋಷಕರು ಕೆಲವರು ಕೈಯಲ್ಲಿ ಕೋಲು ದೊಣ್ಣೆ ಹಿಡಿದು ತಾವೇ ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿದ್ದಾರೆ ಎಂದು ಮಲ್ಲಿನಾಥ ಪುರದ ಎಸ್ ಪವನ್ ತಿಳಿಸಿದ್ದಾರೆ.
ಈ ಕುರಿತು ಸಾರ್ವಜನಿಕರು ಗ್ರಾ ಪಂ ಪಿಡಿಒ ಅವರ ಗಮನಕ್ಕೆ ತಂದರೆ ನಾಯಿಗಳನ್ನು ಕೊಂದರೆ ಪ್ರಾಣಿದಯಾ ಸಂಘದವರು ನಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬ ನೆಪ ತೋರಿ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ ಎಂದು ದೂರಿರುವ ಅವರು ಕೂಡಲೇ ಪಂಚಾಯತ ಅಧಿಕಾರಿಗಳು ಈ ನಾಯಿಗಳ ಹಿಡಿಯುವ ಕುರಿತು ಕ್ರಮ ವಹಿಸದಿದ್ದರೆ ಜನ ಇನ್ನಷ್ಟು ಸಾವು ನೋವು ಅನುಭವಿಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: