ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ರವಿವಾರದಂದು ಗದ್ಯಾಳ ರೈತ ಉತ್ಪಾದಕ ಸಂಘ ನಿಯಮಿತ. ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತಾಲೂಕಿನಲ್ಲಿ ಪ್ರಪ್ರಥಮವಾಗಿ ಎಂ ಸಿ ಎಲ್ ಕಂಪನಿಯವರು ಬಯೋಗ್ಯಾಸ್ ಉತ್ಪಾದನಾ ಘಟಕವನ್ನು ಜಮಖಂಡಿ ತಾಲೂಕಿನಲ್ಲಿ ಸ್ಥಾಪಿಸಲು ಮುಂದಾಗಿರುತ್ತಾರೆ. ಇದರ ನೇತತ್ವವನ್ನು ನಿಂಗಪ್ಪ ನಿಂಬಾಳ್ಕರ್ ಶಿಖರೆಪ್ಪ ಸಣಸಿದ್ದ ಇತರೆ ಎಂಟು ಜನ ಸದಸ್ಯರು ಕಂಪನಿಯ ಸದಸ್ಯತ್ವವನ್ನು ಹೊಂದಿದ್ದಾರೆ.
ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಹಸಿರು ಮೇವು (ಆನೆ ಮೇವು) ತಮ್ಮ ಹೊಲದಲ್ಲಿ ಬೆಳೆದು ಕ್ವಿಂಟಲ್ ಅಥವಾ ಟನ್ ಈ ಕಂಪನಿಗೆ ಕಳುಹಿಸಬಹುದು ಇದರಿಂದ ಕಂಪನಿಯು ಬಯೋಗ್ಯಾಸ್ ಮತ್ತು ಕಾಂಪೋಸ್ಟ್ ಗೊಬ್ಬರ ಉತ್ಪಾದನೆ ಮಾಡುತ್ತದೆ. ಇದರಿಂದ ರೈತರಿಗೆ ಒಳ್ಳೆಯ ಲಾಭಂಶ ಆಗಬಹುದು ಎಂಬ ವಿಶ್ವಾಸ ಕಂಪನಿಯವರದ್ದು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಸಿದ್ಧಾರೂಢ ಭಾರತಿ ಮಹಾ ಸ್ವಾಮೀಜಿ ಮಂಟೂರ ಯಳಸಂಗಿರವರು ವಹಿಸಿದ್ದರು. ಪರಮಪೂಜ್ಯ ಶ್ರೀ ಶಿವಪುತ್ರ ಅವದೂತ್ ಸ್ವಾಮೀಜಿ. ಪರಮಪೂಜ್ಯ ಶ್ರೀ ಲಕ್ಷ್ಮಣ ದೇವರು ಮುನ್ಯಾಳ. ಹಾಗು ಪೂಜ್ಯ ಶ್ರೀ ರಾಮಯ್ಯ ಬಬಲಾದಿಮಠ ಗದ್ಯಾಳ ಇದ್ದರು. ಕಚೇರಿಯ ಉದ್ಘಾಟಕರಾಗಿ ಜಮಖಂಡಿಯ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ. ವಿಧಾನಪರಿಷತ್ ಸದಸ್ಯರಾದ ಸುನಿಲ್ ಗೌಡ ಪಾಟೀಲ. ಅಪ್ಪಾಸಾಬ ಪಾಟೀಲ್ (ಸೆಗುಣಶಿ).ಆಗಮಿಸಿ ಕಚೇರಿಯ ಉದ್ಘಾಟನೆಯನ್ನು ಮಾಡಿದರು.
ಮುಖ್ಯ ಅತಿಥಿಗಳಾಗಿ ಅರ್ಜುನ್ ದಳವಾಯಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು. ಮತ್ತು ಊರಿನ ಹಿರಿಯರಾದ ಇಮಾಂಸಾಬ್ ಹಕ್ಕಿ. ಅಣ್ಣಾಸಾಬ ದೇವರವರ. ಹನುಮಂತ ತೇಲಿ. ಭೀಮಪ್ಪ ನಿಂಬಾಳಕರ. ಸುರೇಶ್ ಹೊಸಟ್ಟಿ. ಅನಿಲ ಉಮರಾಣಿ. ಲಕ್ಷ್ಮಣ ತೇಲಿ. ಪ್ರಶಾಂತ್ ಪಾರ್ಥನಹಳ್ಳಿ. ಭೈರಪ್ಪ ಕವಟೆಕರ. ಮಲ್ಲಯ್ಯ ಹಿರೇಮಠ ಮಾಜಿ ಸೈನಿಕರು. ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ವರದಿ ಕಿರಣ ಸೂರಗೂಂಡ ಸಾವಳಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ