December 21, 2024

Bhavana Tv

Its Your Channel

ಹುನಗುಂದ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಹುನಗುಂದ ಕರಡಿ ಮಾರ್ಗ ಸಂಪೂರ್ಣ ಸ್ಥಗಿತ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುನಗುಂದ ಕರಡಿ ಮಾರ್ಗ ಸಂಪೂರ್ಣ ಸ್ಥಗಿತವಾಗಿದೆ ಬೇಕಮಲದಿನ್ನಿ ಹಳ್ಳದಲ್ಲಿ ಸರ್ಕಾರಿ ಬಸ್ಸು ಸಿಲುಕಿ ಪ್ರಯಾಣಿಕರು ಪರದಾಡುವಂತಾಗಿದೆ ಸದ್ಯ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ , ಮಳೆಯಿಂದಾಗಿ ರಸ್ತೆಯೂ ಸಂಪೂರ್ಣ ಜಲಾವೃತ ಆಗಿದ್ದು ವಾಹನ ಸವಾರರು ಹಾಗೂ ಬೈಕ್ ಸವಾರರು ಹಳ್ಳವನ್ನು ದಾಟಲು ತುಂಬಾ ಕಷ್ಟವನ್ನು ಅನುಭವಿಸಿದರು ಈ ಒಂದು ಸಮಸ್ಯೆ ಇದೆ ಮೊದಲ ಬಾರಿಗೆ ಅಲ್ಲ ಪ್ರತಿ ಸಲ ಬಾರಿ ಮಳೆ ಬಂದಾಗಲೂ ಇದೇ ರೀತಿ ಸಮಸ್ಯೆ ಆಗುತ್ತಿದೆ ಈ ಒಂದು ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಶಾಸಕರಾಗಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲೀ ಮುಂದಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಏನಾದರೂ ಅನಾವುತ ಸಂಭವಿಸುವ ಮುಂಚೆ ಸಂಬAಧಿಸಿದ ಅಧಿಕಾರಿಗಳು ಸ್ಥಳಿಯ ಶಾಸಕರು ಈ ಒಂದು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ

ವರದಿ: ಮಹಾಂತೇಶ ಕುರಿ

error: