December 22, 2024

Bhavana Tv

Its Your Channel

ನಿನ್ನೆ ಸುರಿದ ಭಾರಿ ಮಳೆಗೆ ತಳಗವಾದಿ ಗ್ರಾಮದಲ್ಲಿ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಹಸು ಸಾವು

ಮಳವಳ್ಳಿ: ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಹಸುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ಸೋಮಪ್ಪ ಎಂಬುವವರು ಮನೆಯ ಮುಂಭಾಗ ಕಟ್ಟಿಹಾಕಿದ್ಧ ಸುಮಾರು ೫೦ ಸಾವಿರ ಮೌಲ್ಯದ ಹಸುವಿನ ಮೇಲೆ ಬೃಹತ್ ಗಾತ್ರದ ಬಸರಿ ಮರ ಬಿದ್ದ ಹಿನ್ನೆಲೆಯಲ್ಲಿ ಹಸು ಸಾವನ್ನಪ್ಪಿದೆ. ಸಂಜೆ ೫ಗಂಟೆಗೆ ಗಾಳಿ ಸಹಿತ ಆರಂಭವಾದ ಮಳೆ ಸಂಜೆ ೭ಗಂಟೆಯವರೆಗೂ ಮುಂದುವರಿದ್ದು, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ೧೦ ಕ್ಕೂ ಹೆಚ್ಚು ಮರಗಳು ಮಳೆ ಮತ್ತು ಗಾಳಿಗೆ ನೆಲಕ್ಕಿರುಳಿವೆ.
ತಾಲ್ಲೂಕಿನ ವಿವಿಧೆಡೆ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ ಹಲವು ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಮಳೆ ನೀರಿನಿಂದಾಗಿ ಸುತ್ತಲಿನ ಜಮೀನುಗಳ ಬೆಳೆಯು ಅಪಾರ ಪ್ರಮಾಣದಲ್ಲಿ ಹಾಳಾಗಿದೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: