May 3, 2024

Bhavana Tv

Its Your Channel

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಮಳವಳ್ಳಿ : ದೇಶವನ್ನು ಉಳಿಸಲು, ಜೊತೆಗೆ ದೇಶದಲ್ಲಿ ರೈತರ ಹತ್ಯೆ ತಡೆದು ಭ್ರಷ್ಟ ಜನವಿರೋಧಿ ಬಿಜೆಪಿಯಿಂದ ದೇಶವನ್ನು ಕಾಪಾಡಲು ಈ ಭಾರಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ರೈತ ಭವನದಲ್ಲಿ ಇಂದು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೂರ್ವ ಸಿದ್ದತಾ ಕೊರತೆ ಹಾಗೂ ಅಭ್ಯರ್ಥಿ ಆಯ್ಕೆಯ ಗೊಂದಲಗಳಿAದಾಗಿ ಕಳೆದ ೩೦ ವರ್ಷಗಳಿಂದ ದಕ್ಷಿಣ ಪದವೀಧರರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯ ವಾಗಿಲ್ಲ ಎಂದು ಹೇಳಿದರು.
ಆದರೆ ಈ ಭಾರಿ ಪೂರ್ವ ಸಿದ್ಧತೆಯನ್ನು ಗಂಭೀರವಾಗಿ ಪರಿಗಣಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಿರುವ ಪಕ್ಷದ ಹೈಕಮಾಂಡ್ ಈಗಾಗಲೇ ಮತದಾರರ ಹೆಸರು ನೋಂದಣಿ ಕಾರ್ಯವನ್ನು ಕೈಗೆತ್ತಿಕೊಂಡು ಪ್ರತಿಯೊಬ್ಬ ಮತದಾರರ ನೋಂದಣಿ ಕಾರ್ಯವನ್ನು ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದು ಅದರಂತೆ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಮತದಾರರ ನೋಂದಣಿ ಮಾಡುವುದರ ಜೊತೆಗೆ ಅವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಭ್ರಷ್ಟ, ಹಾಗೂ ಜನ ವಿರೋಧಿ ಜೊತೆಗೆ ದೇಶವನ್ನೇ ಖಾಸಗಿಯವರುಗೆ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ದ ಜನಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಅಲ್ಲದೆ ಅಭ್ಯರ್ಥಿ ಆಯ್ಕೆಯಲ್ಲೂ ಈ ಭಾರಿ ಯಾವುದೇ ಗೊಂದಲಕ್ಕೆ ಅವಕಾಶ ವಿಲ್ಲದಂತೆ ಮಂಡ್ಯ ಜಿಲ್ಲೆಗೆ ಆಧ್ಯತೆ ನೀಡಿ ಮಧು ಜಿ ಮಾದೇಗೌಡರ ಹೆಸರನ್ನು ರಾಜ್ಯ ಸಮಿತಿ ಎಐಸಿಸಿಗೆ ಶಿಫಾರಸ್ಸು ಮಾಡಿದ್ದು ಇವರ ಗೆಲುವು ಶತಸಿದ್ದ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಆಕಾಂಕ್ಷಿ ಯಾಗಿರುವ ಮಧು ಜಿ ಮಾದೇಗೌಡ ಮಾತನಾಡಿ ನಮ್ಮ ತಂದೆ ಜಿ ಮಾದೇಗೌಡರ ಸೇವೆ ಹಾಗೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷನಾಗಿ ಕಳೆದ ೧೫ ವರ್ಷಗಳ ನನ್ನ ಅನುಭವ ಎಲ್ಲವನ್ನೂ ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ್ದು ಪ್ರತಿಯೊಬ್ಬ ಮತದಾರರ ನೋಂದಣಿ ಮಾಡಿಸಿ ನನ್ನ ಗೆಲುವಿಗೆ ಇಂದಿನಿAದಲೇ ಶ್ರಮಿಸುವುದರ ಜೊತೆಗೆ ಮುಂದಿನ ವಿಧಾನ ಸಭಾ ಚುನಾವಣಾಗೆ ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕುವಂತೆ ಕೋರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜೆ ದೇವರಾಜು, ಸುಂದರ್ ರಾಜ್, ಮಾಜಿ ಜಿ ಪಂ ಸದಸ್ಯೆ ಸುಜಾತ ಕೆ ಎಂ ಪುಟ್ಟು, ಮುಖಂಡರಾದ ಸಿದ್ದೇಗೌಡ, ಚಿಕ್ಕಲಿಂಗಯ್ಯ, ತಳಗವಾದಿ ಚೌಡಯ್ಯ, ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: