December 22, 2024

Bhavana Tv

Its Your Channel

ಬಿ ಎಸ್ ಬಸವರಾಜುರವರಿಗೆ ಟಿಕೇಟ್ ನೀಡಬೇಕೆಂದು ಗಾಣಿಗ ಸಮುದಾಯದ ಮುಖಂಡರಿOದ ಬಿಜೆಪಿ ವರಿಷ್ಠರಿಗೆ ಆಗ್ರಹ

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಣಿಗ ಸಮುದಾಯದ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮುದಾಯಕ್ಕೆ ರಾಜಕೀಯ ಪ್ರಾಧಾನ್ಯತೆ ನೀಡುವ ದೃಷ್ಟಿ ಯಿಂದ ಈ ಸಮುದಾಯದ ಮುಖಂಡ ಬಿ ಎಸ್ ಬಸವರಾಜು ಅವರಿಗೆ ಬೆಳಕವಾಡಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಟಿಕೇಟ್ ನೀಡಬೇಕೆಂದು ಗಾಣಿಗ ಸಮುದಾಯದ ಮುಖಂಡರು ಬಿಜೆಪಿ ವರಿಷ್ಠ ರನ್ನು ಆಗ್ರಹಿಸಿದ್ದಾರೆ.
ಬೆಳಕವಾಡಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಗಾಣಿಗ ಸಮುದಾಯದ ಹಿರಿಯ ಮುಖಂಡ ಸಿ ಎಸ್ ಕಾಳಶೆಟ್ಟಿ, ಗಾಣಿಗರ ಸಂಘದ ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಬೆಳಕವಾಡಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಗಾಣಿಗ ಸಮುದಾಯದ ಜನ ಅಧಿಕ ಸಂಖ್ಯೆಯಲ್ಲಿದ್ದು ಆದರೆ ಈವರೆಗೂ ಯಾವುದೇ ಪಕ್ಷ ಸಹ ಸೂಕ್ತ ರಾಜಕೀಯ ಅವಕಾಶವನ್ನು ನೀಡಿಲ್ಲ ಎಂದು ವಿಷಾಧಿಸಿದರು.
ಈ ಕಾರಣದಿಂದ ತೀರ ಹಿಂದುಳಿದ ವರ್ಗಕ್ಕೆ ಸೇರಿದ ಗಾಣಿಗ ಸಮುದಾಯ ರಾಜಕೀಯವಾಗಿ ಯಾವುದೇ ಸ್ಥಾನಮಾನ ಸಿಗದೆ ತೀರ ಹಿಂದುಳಿದಿದೆ ಎಂದ ಅವರು ಮುಂಬರುವ ಜಿ ಪಂ ಚುನಾವಣೆಯಲ್ಲಿ ಈ ಸಮುದಾಯಕ್ಕೆ ಸೇರಿದ ಜನಾನುರಾಗಿ ಮುಖಂಡ ಬಿ ಎಸ್ ಬಸವರಾಜು ಅವರಿಗೆ ಬೆಳಕವಾಡಿ
ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ನೀಡಬೇಕೆಂದು ಬಿಜೆಪಿ ಹೈಕಮಾಂಡ್ ನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಕವಾಡಿ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಬಿ ಎಸ್ ಬಸವರಾಜು ಅವರು ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವುದರ ಜೊತೆಗೆ ಈ ಭಾಗದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳು
ಕನ್ನಡಪರ ಹೋರಾಟಗಳ ಮೂಲಕ ಎಲ್ಲಾ ವರ್ಗದ ಜನರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ ಎಂದರು.
ತಮ್ಮ ಗಾಣಿಗ ಸಮುದಾಯದ ೪ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮತದಾರರು ಈ ಕ್ಷೇತ್ರದಲ್ಲಿದ್ದು ಜೊತೆಗೆ ಇತರೆ ಸಮುದಾಯದ ಬೆಂಬಲಗಳಿಸಿರುವ ನನ್ನ ಗೆಲುವು ನಿಶ್ಚಿತವಾದ್ದರಿಂದ ಬಿಜೆಪಿ ಪಕ್ಷದ ವರಿಷ್ಠರು ನನಗೆ ಟಿಕೇಟ್ ನೀಡಬೇಕೆಂದು ಮನವಿ ಮಾಡಿದರಲ್ಲದೇ ಇಷ್ಟರಲ್ಲೇ ಸಮಾಜದ ಮುಖಂಡರೊಡ ಗೂಡಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಸಮುದಾಯದ ಮುಖಂಡ ರಾದ ಬೆಳಕವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗಮಾದಶೆಟ್ಟಿ, ನಿರ್ಧೇಶಕ ಕೆಂಪಶೆಟ್ಟಿ, ಮುಖಂಡರಾದ ಚಂದ್ರಶೇಖರ್, ಮಹಾದೇವಸ್ವಾಮಿ, ಸಂತೋಷ್, ಮಾರಶೆಟ್ಟಿ, ಮಹದೇವಶೆಟ್ಟಿ, ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: