ಮಳವಳ್ಳಿ : ದಲಿತ ಯುವಕನೊಬ್ಬನ ಮೇಲೆ ಹಸು ಕದ್ದೊಯ್ಯುತ್ತಿದ್ದ ಸುಳ್ಳು ಆರೋಪದ ಮೇಲೆ ಆತನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದೇ ಅಲ್ಲದೆ ಆತನ ಕೈಗಳನ್ನು ಹಿಮ್ಮುಖವಾಗಿ ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಅವಮಾನ ಮಾಡಿರುವರೆನ್ನಲಾದ ಪ್ರಕರಣವೊಂದು ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ ಗ್ರಾಮದಿಂದ ವರದಿಯಾಗಿದೆ.ಈ ಸಂಬoಧ ನಾಲ್ವರ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿರುವ ಮಳವಳ್ಳಿ ಗ್ರಾಮಾಂತರ ಠಾಣೆ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ತಾಲ್ಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ ಬಿನ್ ಸುಂದ್ರಪ್ಪ ಎಂಬುವವರೇ ಹಲ್ಲೆ ಗೊಳಗಾಗಿರುವವರಾಗಿದ್ದು
ಈತ ದುಗ್ಗನಹಳ್ಳಿ ಗ್ರಾಮದ ರಾಜು ಬಿನ್ ವೀರತಪ್ಪ ಎಂಬುವವರಿAದ ಹಸು ವೊಂದನ್ನು ಖರೀದಿ ಮಾಡಿದ್ದು ಹಾಲು ಕೊಡುವ ಹಸು ನೀಡುವುದಾಗಿ ೫೯,೦೦೦ ಸಾವಿರ ಹಣವನ್ನು ಪಡೆದ ದುಗ್ಗನಹಳ್ಳಿ ಗ್ರಾಮದ ರಾಜು ಹಾಲು ನೀಡದ ಗೊಡ್ಡು ಹಸುವನ್ನು ನೀಡಿ ವಂಚನೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಈ ಸಂಬoಧ ರಾಜುರವರನ್ನು ಪ್ರಶ್ನೆ ಮಾಡಲಾಗಿದ್ದು ಅ.೧೨ ರಂದು ಬೇರೆ ಹಸುವನ್ನು ನೀಡುವುದಾಗಿ ಫಿರ್ಯಾದಿದಾರನನ್ನು ಬೆಳಿಗ್ಗೆ ೦೯ ಗಂಟೆಗೆ ದುಗ್ಗನಹಳ್ಳಿ ಗ್ರಾಮಕ್ಕೆ ಕರೆಸಿಕೊಂಡು ಪೂರ್ವ ನೀಯೋಜಿತ ಎಂಬAತೆ ಫಿರ್ಯಾದಿದಾರ ಮತ್ತು ಹಣಕೊಳ ಗ್ರಾಮದ ಗವಿಸಿದ್ದಯ್ಯ ಎಂಬುವವರು ರಾಜುರವರ ಮನೆಗೆ ಹೋದಾಗ ಅವರ ಸಂಬAಧಿಕರು ಹಸುವನ್ನು ನೀಡಿ ರಾಜು ಅವರು ಜಮೀನಿನಲ್ಲಿದ್ದಾರೆ ಅಲ್ಲಿಗೆ ಹೋಗುವಂತೆ ತಿಳಿಸಿದ ಮೇರೆಗೆ ಹಸುವಿನ ಜೊತೆಯಲ್ಲಿ ಅಲ್ಲಿಗೆ ಹೋದಾಗ ನನ್ನ ಹಸುವನ್ನು ಕಳುವು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಕೂಗಾಡಿ ರಂಪಾಟ ಮಾಡಿದ ರಾಜು ತಮ್ಮ ಹಿಂಬಾಲಕರಿAದ ಹಿಡಿದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈತ ಹೊಲೆಯ ಜಾತಿಯವನು, ಹಣಕೊಳ ಗ್ರಾಮಕ್ಕೆ ಸೇರಿದವನು, ನನ್ನ ಹಸುವನ್ನು ಕದ್ದುಕೊಂಡು ಹೋಗುತ್ತಿದ್ದಾನೆ, ಎಂದು ಜನರನ್ನು ಸೇರಿಸಿ ನನ್ನನ್ನು ಮರಕ್ಕೆ ಕಟ್ಟಿಹಾಕಿ ಹಗ್ಗದಿಂದ ಬಿಗಿದು ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ರಾಜು, ಮಳವಳ್ಳಿಯವರಾದ ಗಿರೀಶ್, ನನ್ನ ಮೇಲೆ ಹಲ್ಲೆ ಮೇಲೆ ಹಲ್ಲೆ ನಡೆಸಿದ್ದು ಇದಕ್ಕೆ ಮಳವಳ್ಳಿಯ ಮಲ್ಲಯ್ಯ ಹಾಗೂ ಹಣಕೊಳ ಗ್ರಾಮದ ಸುಂದರಮ್ಮ ಹಾಗೂ ದುಗ್ಗನಹಳ್ಳಿ ಗ್ರಾಮದ ಇತರರು ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿದ್ದಾರೆ. ನಂತರ ತನ್ನ ಕೈಯನ್ನು ಹಿಂದಕ್ಕೆ ಕಟ್ಟಿ ಸುಮಾರು ಒಂದು ಕಿ ಮೀ ವರೆಗೆ ರಸ್ತೆಯುದ್ದಕ್ಕೂ ನಡೆಸಿ ಮೆರವಣಿಗೆ ಮಾಡಿ ಅವಮಾನ ಮಾಡಿ ನಂತರ ಬಿಟ್ಟು ಕಳುಹಿಸಿದರೆಂದು ಸುರೇಶ್ ವರ್ಧನ್ ದೂರಿನಲ್ಲಿ ವಿವರಿಸಿದ್ದಾರೆ.
ಈ ಸಂಬoಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.ಈ ನಡುವೆ ಸುರೇಶ್ ವರ್ಧನ್ ನನ್ನ ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡಿ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರೊಂದಿಗೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೃತ್ಯ ನಡೆದ ಸ್ಥಳಕ್ಕೆ ಮಳವಳ್ಳಿ ಉಪವಿಭಾಗದ ಡಿ ವೈ ಎಸ್ ಪಿ,ಲಕ್ಷ್ಮೀನಾರಾಯಣ ಪ್ರಸಾದ್, ವೃತ್ತ ನೀರಿಕ್ಷಕ ಡಿ. ಪಿ. ಧನರಾಜು, ಪಿ. ಎಸ್. ಐ, ರವಿಕುಮಾರ್ ಡಿ. ಭೇಟಿ ನೀಡಿದ್ದಾರೆ,ದಲಿತ ಮುಖಂಡ ಸುಂದರ ಹಣಕೊಳ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ದಲಿತ ವ್ಯಕ್ತಿಗೆ ಮೋಸ ಮಾಡಿದಲ್ಲದೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ