December 22, 2024

Bhavana Tv

Its Your Channel

ಮಂಡ್ಯದ ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭ, ಜೆಡಿಎಸ್ ಕಾರ್ಯಕರ್ತರಿಂದ ವಿಜಯೋತ್ಸವ

ಮಳವಳ್ಳಿ : ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿ ಸುವುದಾಗಿ ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಇಂದು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮಳವಳ್ಳಿ ಪಟ್ಟಣದ ಪೇಟೆ ವೃತ್ತದ ಬಳಿ ನೆರೆದ ಮುಖಂಡರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಜೊತೆಗೆ ಜಯಘೋಷ ಗಳನ್ನು ಕೂಗಿ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ಮಂಡ್ಯ ಜಿಲ್ಲೆಯ ಜೀವನಾಡಿ ಹಾಗೂ ಜನರ ಭಾವನಾತ್ಮಕ ಸಂಬAಧದ ಕೊಂಡಿಯಾಗಿರುವ ಮೈಷುಗರ್ ಕಾರ್ಖಾನೆಯ ಖಾಸಗಿಕರಣವನ್ನು ವಿರೋಧಿಸಿ ಹಾಗೂ ಸರ್ಕಾರಿ ಸ್ವಾಮ್ಯದಲ್ಲೇ ಈ ಕಾರ್ಖಾನೆಯನ್ನು ಆರಂಭಿಸ ಬೇಕೆಂದು ಆಗ್ರಹಿಸಿ ಕಳೆದ ೩೬ ದಿನಗಳ ಕಾಲ ಜಿಲ್ಲೆಯ ಎಲ್ಲಾ ಪಕ್ಷಗಳು, ರೈತಪರ ಹಾಗೂ ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ್ದವು, ಪ್ರಮುಖವಾಗಿ ಮಳವಳ್ಳಿ ಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ೩೫ ಕಿ ಮೀ ದೂರ ಪಾದಯಾತ್ರೆ ಮಾಡುವ ಮೂಲಕ ಕ್ಷೇತ್ರದ ಶಾಸಕರಾದ ಡಾ. ಕೆ ಅನ್ನದಾನಿ ಅವರು ಮೈಷುಗರ್ ಹೋರಾಟಕ್ಕೆ ತೀವ್ರ ಸ್ವರೂಪವನ್ನು ನೀಡಿದರು ಎಂದು ತಿಳಿಸಿದರು.
ಈ ಎಲ್ಲಾ ಹೋರಾಟಗಳ ಫಲವಾಗಿ ಎಚ್ಚೆತ್ತ ರಾಜ್ಯ ಸರ್ಕಾರ ಜಿಲ್ಲೆಯ ಜನರ ಹೋರಾಟವನ್ನು ಗೌರವಿಸಿ ಜಿಲ್ಲೆಯ ಮುಖಂಡರ ಜನಪ್ರತಿ ನಿಧಿಗಳ ಸಭೆ ಕರೆದು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸುವ ಘೋಷಣೆ ಮಾಡಿರುವುದು ಜಿಲ್ಲೆಯ ಜನರ ಹೋರಾಟಕ್ಕೆ ಸಂದ ಗೌರವವಾಗಿದೆ ಎಂದರಲ್ಲದೆ ಜಿಲ್ಲೆಯ ಜನರ ಭಾವನೆಯನ್ನು ಗೌರವಿಸಿದ ರಾಜ್ಯ ಸರ್ಕಾರವನ್ನು ಅಭಿನಂದಿಸಿ ದರು.
ಪುರಸಭಾ ಸದಸ್ಯರಾದ ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ಕುಮಾರ್, ಪ್ರಾಂತ ರೈತ ಸಂಘದ ಭರತ್ ರಾಜ್, ಮುಖಂಡರಾದ ಪೊತಂಡೆ ನಾಗರಾಜು, ಮೆಡಿಕಲ್ ಕುಮಾರ್, ಅಂಕನಾಥ್, ಕಂಬರಾಜು, ಮಾದೇಶ, ಕಲ್ಕುಣಿ ನಂಜುAಡಸ್ವಾಮಿ, ಮತ್ತಿತರರು ಪಾಲ್ಗೊಂಡಿದ್ದರು.

ವರದಿ:ಮಲ್ಲಿಕಾರ್ಜುನ ಮಳವಳ್ಳಿ

error: