ಇಳಕಲ್ : ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯಲ್ಲಿ ರಾಮಾಯಣ ಮಹಾಕಾವ್ಯ ಕತೃ ಆದಿಕವಿ “ಮಹರ್ಷಿ ವಾಲ್ಮೀಕಿ” ಜಯಂತಿಯನ್ನು ಭಾವಚಿತ್ರ ಪೂಜೆಯೊಂದಿಗೆ ಆಚರಿಸಲಾಯಿತು.
ಮುಖ್ಯ ಗುರುಗಳಾದ ಸಂಗಣ್ಣ ಗದ್ದಿ, ಶಿಕ್ಷಕರಾದ ವಿ.ಎಸ್.ಶೆಟ್ಟರ,ಎಂ.ಎಸ್.ಹಾಲಶೆಟ್ಟಿ. ಎಂ.ಎಸ್.ಕುಲಕರ್ಣಿ, ಶ್ರೀಮತಿ. ಎಸ್.ಎಚ್.ಜೋಗಿನ, ವಿ.ಎಸ್.ಲಾಳಿ, ಗೀತಾಂಜಲಿ, ಎಸ್.ಎ.ಪಾಟೀಲ ಮಹರ್ಷಿ ವಾಲ್ಮೀಕಿಯವರ ಹಾಗೂ ಮಹಾಕಾವ್ಯ ರಾಮಾಯಣದ ಶ್ರೇಷ್ಠತೆಯನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉಮೇಶ ಸಾಕ್ರೆ, ಸುಶೀಲಾ ರಾಠೋಡ, ಬಸು ಲಾಳಿ ಸೇರಿದಂತೆ ಸರ್ವ ಸಿಬ್ಬಂದಿಯವರು ಉಪಸ್ಥಿತರಿದ್ದರು .
ವರದಿ: ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ