December 21, 2024

Bhavana Tv

Its Your Channel

ಗದ್ಯಾಳ ಗ್ರಾಮದಲ್ಲಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಸಾವಳಗಿ: ಜಮಖಂಡಿ ತಾಲೂಕಾ ಮಾಳಿ ಸಮಾಜ ನೌಕರರ ಸಂಘ, ಜಮಖಂಡಿ ತಾಲ್ಲೂಕಾ ಹಾಗೂ ಗದ್ಯಾಳ ಗ್ರಾಮದ ಮಾಳಿ ಸಮಾಜದ ಸಮಸ್ತ ಗುರು ಹಿರಿಯರ ಸಂಯುಕ್ತ ಆಶ್ರಯದಲ್ಲಿ ೨೦೨೦-೨೧ನೆ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಜೋತಿಬಾ ಫುಲೆ ಯುವಕ ಸಂಘ ಉದ್ಘಾಟನಾ ಕಾರ್ಯಕ್ರಮ ಗದ್ಯಾಳ ಗ್ರಾಮದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬೆಳ್ಳಂಕಿ, ಪಾವನ ಸಾನಿಧ್ಯವನ್ನು ವಿವೇಕಾನಂದ ದೇವರು ಗುಣದಾಳ, ಜ್ಞಾನೇಶ್ವರ ಮಹಾಸ್ವಾಮಿಗಳು ನಾಗರಾಳ, ಘಟವಾಳಯ್ಯಾ ಬಬಲಾದಿಮಠ ಗದ್ಯಾಳ ಪರಮ ಪೂಜ್ಯರ ಸಾನಿಧ್ಯದಲ್ಲಿ ನೇರವೆರಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಮಖಂಡಿಯ ಮಾಜಿ ಶಾಸಕರಾದ ಶ್ರಿಕಾಂತ ಕುಲಕರ್ಣಿಯವರು ವಿಧ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತು ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುತ್ತಿರುವ ಮಾಳಿ ಸಮಾಜ ನೌಕರರ ಸಂಘ ಹಾಗೂ ಮಾಳಿ ಸಮಾಜದ ಎಲ್ಲಾ ಹಿರಿಯರಿಗೆ ಧನ್ಯವಾದಗಳನ್ನು ಹೇಳಿದರು.

ಜೋತಿಬಾ ಪುಲೆ ಯುವಕ ಸಂಘ ಉದ್ಘಾಟಿಸಿ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ ಜೋತಿಬಾ ಫುಲೆ ಹಾಗೂ ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರು ಎಲ್ಲಾ ಜಾತಿಯ ಮಹಿಳೆಯರಿಗೆ ಶಿಕ್ಷಣ ಸಿಗಲು ಹೋರಾಟಗಳನ್ನು ಮಾಡಿದ್ದಾರೆ ಅಂತಹ ಮಹಾನ ಹೋರಾಟಗಾರರ ಹೆಸರಿನಲ್ಲಿ ಸಂಘಟನೆ ಮಾಡಿದಿರಿ ಹೀಗೇ ಈ ಸಂಘಟನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೆನೆ ಎಂದರು.

ಇದೆ ಸಂದರ್ಭದಲ್ಲಿ ಎಸ ಎಸ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿ/ನಿಯರನ್ನು ಸನ್ಮಾನಿಸಿ ಪ್ರೋತ್ಸಾಹ ಧನವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ, ಸದಾಶಿವ ಬುಟಾಳಿ, ಬಿ ಎಸ್ ಸಿಂಧೂರ, ಶಿವಾನಂದ ಪಾಟೀಲ, ಅರ್ಜುನ ದಳವಾಯಿ, ಸಿದ್ದಣ್ಣ ಮಾಲಗಾರ ಸೇರಿದಂತೆ ಅನೇಕ ಮುಖಂಡರು ಇದ್ದರು.

ವರದಿ: ಕಿರಣ ಸೂರಗೂಂಡ ಸಾವಳಗಿ

error: