March 14, 2025

Bhavana Tv

Its Your Channel

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ೨ ತಲೆಯನ್ನು ಹೋಲುವ ವಿಚಿತ್ರ ಮಗು ಜನನ

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ೨ ತಲೆಯನ್ನು ಹೋಲುವ ವಿಚಿತ್ರವಾದ ಮಗುವೊಂದು ಜನನವಾಗಿದ್ದು, ಮಗುವಿನ ತಾಯಿ ಸುರಕ್ಷಿತವಾದ್ದು, ಸದ್ಯ ಮಗು ಜೀವಂತವಾಗಿದೆ.

ಕುಮಟಾ ತಾಲೂಕಿನ ಮಹಿಳೆಯೊರ್ವರು ಹೊಟ್ಟೆ ನೋವಿನಿಂದ ಭಟ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದರು. ಭಟ್ಕಳದಲ್ಲಿ ಸ್ಕಾö್ಯನಿಂಗ್ ಮಾಡಿದಾಗ ಮಗು ೨ ತಲೆ ಹೋಲುವದನ್ನು ಕಂಡು ವೈದ್ಯರು ದಂಗಾಗಿದ್ದಾರೆ. ಮಹಿಳೆ ಸುಮಾರು ೮ ತಿಂಗಳವರೆಗೆ ಕುಮಟಾದ ಪ್ರಖ್ಯಾತ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆ ಗಳಿಗೆಯಲ್ಲಿ ಅವರು ಕೈ ಚೆಲ್ಲಿದಾಗ ಗರ್ಬಿಣಿ ಮಹಿಳೆ ಮಣಿಪಾಲ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿಯೂ ವೈದ್ಯರು ಮಗು ಬದುಕುವ ಯಾವುದೆ ಲಕ್ಷಣ ಕಾಣಿಸುವದಿಲ್ಲ. ಇಲ್ಲಿ ಚಿಕಿತ್ಸೆ ವೆಚ್ಚವೂ ಹೆಚ್ಚಾಗಬಹುದು ಎಂದಿದ್ದಾರೆ. ನಂತರ ಮಹಿಳೆ ಭಟ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ಕಷ್ಟಕರವಾದ ಈ ಪ್ರಕರಣವನ್ನು ತನ್ನೆಲ್ಲಾ ಅನುಭವದಿಂದ ನಾರ್ಮಲ್ ಹೆರಿಗೆ ಆಗುವ ಹಾಗೆ ಮಾಡಿದ್ದಾರೆ. ತಾಯಿ ಸುರಕ್ಷಿತವಾಗಿದ್ದಾರೆ. ೨ ತಲೆಯನ್ನು ಹೊಲುವ ಮಗುವು ಸದ್ಯ ಜೀವಂತವಾಗಿದ್ದರೂ ಬದುಕುವ ಲಕ್ಷಣ ಕ್ಷೀಣ ಎಂದು ವೈದ್ಯಾಧಿಕಾರಿ ಡಾ ಸವಿತಾ ಕಾಮತ ತಿಳಿಸಿದ್ದಾರೆ. ಇದು ೧೦ಸಾವಿರ ಶಿಶುಗಳಲ್ಲಿ ಒಬ್ಬರಿಗೆ ಬರುವ ಖಾಯಿಲೆಯಾಗಿದೆ ಎನ್ನಲಾಗಿದೆ.

error: