ಮಳವಳ್ಳಿ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಿ ಆರ್ ಸಿ ಕಚೇರಿ ಮಕ್ಕಳ ರಕ್ಷಣಾ ಘಟಕ ಹಾಗೂ ನಿವೃತ್ತ ಶಿಕ್ಷಕ ಮಾಹಿಗ ಶೆಟ್ಟಿ ಸೇವಾ ಸಮಿತಿ ಹಾಗೂ ಡಾನ್ ಬೋಸ್ಕೋ ಯುವ ಮಾರ್ಗ ಯೋಜನೆ ಮಂಡ್ಯ ಇವರುಗಳ ಸಹಯೋಗದೊಂದಿಗೆ ಶಿಕ್ಷಕರು ಮತ್ತು ಮಕ್ಕಳ ಹಕ್ಕುಗಳ ಕುರಿತು ಒಂದು ದಿನದ ಕಾರ್ಯಗಾರ ಮಂಡ್ಯ ನಗರದ ಬಿ ಆರ್ ಸಿ ಕೇಂದ್ರ ಉತ್ತರ ವಲಯದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಎಸ್ ರಾಜ ಮೂರ್ತಿ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತನಾಡಿ ಬಾಲ್ಯ ವಿವಾಹ ಸಹ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಕೆಲ ಮಕ್ಕಳುಗಳು ಬಾಲ ಕಾರ್ಮಿಕರು ಕೆಲಸ ಮುಗಿಸಿ ನಂತರ ಶಾಲೆಗೆ ಬರುವಂತಾಗಿದೆ ಅಂತಹ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆದುಕೊಂಡು ಬಂದು ಸೇರಿಸಬೇಕು. ಬಹಳ ದುರಂತ ಎಂದರೆ ಬಾಲ್ಯವಿವಾಹವು ನಮ್ಮ ಜಿಲ್ಲೆ ೫ನೇ ಸ್ಥಾನದಲ್ಲಿದೆ ಎಂದರು ಬಾಲಕಾರ್ಮಿಕರ ತಡೆಗೆ ಗ್ರಾಮಗಳಲ್ಲಿ ಹೆಚ್ಚು ಪ್ರಚಾರವಾಗಬೇಕು ಮತ್ತು ಅದರ ಬಗ್ಗೆ ಅರಿವು ಮೂಡಿಸಬೇಕು ಎಂದರು
ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಈರಯ್ಯ ಮಾತನಾಡಿ ಈಗಾಗಲೇ ಮಕ್ಕಳ ರಕ್ಷಣೆ ಬಗ್ಗೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಲು ಕರಾಟೆ ಯನ್ನು ತರಬೇತಿ ನೀಡುತ್ತಿದೆ ಹೆಣ್ಣುಮಕ್ಕಳು ಎಲ್ಲರೂ ತರಬೇತಿ ಪಡೆಯಬೇಕು ಮತ್ತು ಗುಣಮಟ್ಟದ ಶಿಕ್ಷಣವನ್ನು ಕಲಿತುಕೊಳ್ಳಬೇಕು ಹಾಗೂ ಕೋರೋನಾ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಯಾಕೆಂದರೆ ಎಂಟರಿAದ ಒಂಬತ್ತು ೯ರಿಂದ ೧೦ ತೇರ್ಗಡೆಯಾಗಿರುವ ಅಂತಹ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ದೊರೆತಿಲ್ಲ ಆದ್ದರಿಂದ ೧೦ನೇ ತರಗತಿಯ ಮಕ್ಕಳು ಈ ಬಾರಿ ಬಹಳ ಜಾಗೃತರಾಗಿ ಹೆಚ್ಚಿನ ಮಟ್ಟದಲ್ಲಿ ಅರ್ಥೈಸಿ ಕೊಂಡು ಪರೀಕ್ಷಾ
ತ್ಮಕವನ್ನು ಎದುರಿಸಿ ತೇರ್ಗಡೆಯಾಗಬೇಕು ಎಂದು ಸಲಹೆ ನೀಡಿದರು.
ಡಾನ್ ಬೋಸ್ಕೋ ನಿರ್ದೇಶಕರುಗಳಾದ ಫಾದರ್ ಸಜ್ಜಿ ಜಾರ್ಜ್ ಹಾಗೂ ಫಾದರ್ ಮರಿಯ ಜೂಲಿಯನ್ ಡಾನ್ ಬೋಸ್ಕೋ ಯುವಕರ ಗ್ರಾಮ ಇವರುಗಳು ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು
ಇದೇ ಸಂದರ್ಭದಲ್ಲಿ ಎಸ್ಡಿಎಂಸಿ ಸಮನ್ವಯ ಸಮಿತಿ ಮಾಜಿ ಜಿಲ್ಲಾ ಅಧ್ಯಕ್ಷರಾದ ಪತ್ರಕರ್ತ ಎಂ ಲೋಕೇಶ್ ಮಾತನಾಡಿ ಬಂದಿರುವ ಎಲ್ಲಾ ಮಕ್ಕಳಿಗೂ ಹಾಗೂ ಡಾನ್ ಬೋಸ್ಕೋ ತರಬೇತಿದಾರರಿಗೆ ಸ್ವಾಗತಿಸಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಮಕ್ಕಳಿಗೆ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜವರೇಗೌಡ ಮಾತನಾಡಿ ಮಕ್ಕಳ ರಕ್ಷಣಾ ಹಕ್ಕುಗಳ ಬಗ್ಗೆ ಈಗಾಗಲೇ ೨೦೦೯ ರಿಂದಲೇ ಸರ್ಕಾರಿ ಶಾಲೆಗಳಲ್ಲಿ ದೂರು ಪೆಟ್ಟಿಗೆ ಸಲಹಾ ಪೆಟ್ಟಿಗೆ ಕಡ್ಡಾಯವಾಗಿ ಇಡಬೇಕೆಂದು ಜಾರಿಯಲ್ಲಿದೆ ಎಷ್ಟು ಶಾಲೆಯಲ್ಲಿದೆ ಎಂದು ಶಿಕ್ಷಕರನ್ನು ಪ್ರಶ್ನಿಸಿದರು ಎಲ್ಲೆಲ್ಲಿ ದೂರು ಪೆಟ್ಟಿಗೆ ಸಲಹಾ ಪೆಟ್ಟಿಗೆ ಇಟ್ಟಿಲ್ಲ ವಾದರೆ ತಪಾಸಣೆ ಮಾಡಲಾಗುವುದು ಮತ್ತು ಶಿಕ್ಷಕರಿಗೆ ಮಕ್ಕಳ ಬಾಂಧವ್ಯ ಕಡಿಮೆ ಯಾಕೆಂದರೆ ಶಿಕ್ಷಕರು ತರಗತಿಯಲ್ಲಿ ಬೋಧನೇತರ ಸಂದರ್ಭದಲ್ಲಿ ೩೦ ಜನ ಮಕ್ಕಳಲ್ಲಿ ೧೦ ಮಕ್ಕಳಲ್ಲಿ ಗೊತ್ತಾಗುವುದಿಲ್ಲ ಅದನ್ನು ಕೇಳಲು ಮಕ್ಕಳಿಗೆ ಮುಜುಗರವಾಗುತ್ತದೆ ಆದ್ದರಿಂದ ಸಲಹಾ ಪೆಟ್ಟಿಗೆ ಗಳಿದ್ದರೆ ಮಕ್ಕಳು ಕೇಳಲು ಅನುಕೂಲವಾಗುತ್ತದೆ ಶಿಕ್ಷಣವೂ ಸಹ ಮಕ್ಕಳ ಮೂಲಭೂತ ಸೌಕರ್ಯ ಮತ್ತು ಆರರಿಂದ ೧೮ ವರ್ಷ ಒಳಗಿನ ಮಕ್ಕಳು ಶಾಲೆಗಳಿಗೆ ದಾಖಲಾಗಬೇಕು ದಾಖಲಾಗಿ ಗುಣಮಟ್ಟ ಶಿಕ್ಷಣ ಪಡೆಯಬೇಕು ಎಂದರು ಇದೇ ಸಂದರ್ಭದಲ್ಲಿ ಅವರ ಬಾಲ್ಯ ಜೀವನವನ್ನು ಮೆಲಕು ಹಾಕಿ ಇವತ್ತು ನಾನು ವೇದಿಕೆಯಲ್ಲಿ ಇದ್ದೀನಿ ಎಂದರೆ ನಮ್ಮ ಹಿಂದಿನ ಗುರುಗಳೇ ಕಾರಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ೩೦ ಶಾಲಾ ಮಕ್ಕಳಿಗೆ ಸ್ಯಾನಿಟೈಜರ್ ಮತ್ತು ಮಾಸ್ಕೋ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಕಾAತ ಸಿಡಿಪಿಓ ಚೇತನ್ ಕುಮಾರ್ ಡಾನ್ ಬಾಸ್ಕೋ ಮಾರ್ಗ ರಾಮನಗರ ಫಾದರ್ ಸಜ್ಜಿ ಜಾರ್ಜ್ ಪತ್ರಕರ್ತರು ಎಸ್ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾದ ಎಂ ಲೋಕೇಶ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ಬಸವರಾಜ್ ಡಾನ್ ಬೋಸ್ಕೋ ನಿರ್ದೇಶಕರಾದ ಫಾದರ್ ಮರಿಯ ಜೂಲಿಯನ್ ಕ್ರೈಂ ಯೋಚನೆ ಡಾನ್ ಬೋಸ್ಕೋ ಯುವ ಮಾರ್ಗ ರವಿ ಡಾನ್ ಬಾಸ್ಕೋ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು ಕಾರ್ಯ ಕ್ರಮಕ್ಕೆ ಬಂಧ ಎಲ್ಲರಿಗೂ ವ್ಯವಸ್ಥೆ ಮಾಡಲಾಗಿತ್ತು ಕಾರ್ಯಕ್ರಮ ಯಶಸ್ವಿಯಾಯಿತು
ವರದಿ: ಲೋಕೇಶ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ