April 27, 2024

Bhavana Tv

Its Your Channel

೧೪ ದಿನಗಳೊಳಗೆ ಹಣ ಪಾವತಿ ಮಾಡಬೇಕೆಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ

ಮಳವಳ್ಳಿ : ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ನಂತರ ಸಕ್ಕರೆ ಕಾರ್ಖಾನೆ ಮಾಲೀಕರು ಮೂರು ಕಂತುಗಳಲ್ಲಿ ಹಣ ಪಾವತಿಸ ಬಹುದೆಂದು ಪ್ರಸ್ತಾವನೆ ಸಲ್ಲಿಸಿರುವ ಕೇಂದ್ರದ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ ದ ಶಿಫಾರಸ್ಸು ರೈತ ವಿರೋಧಿಯಾಗಿದ್ದು, ಸಕ್ಕರೆ ಕಂಪನಿಗಳ ಲಾಬಿಗೆ ಮಣಿದಿದೆ. ಇದನ್ನು ತಿರಸ್ಕರಿಸಿ ೧೪ ದಿನಗಳೊಳಗೆ ಹಣ ಪಾವತಿ ಮಾಡಬೇಕೆಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿವೆ.

ಮಳವಳ್ಳಿಯ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕರಾದ ಎನ್.ಎಲ್. ಭರತ್‌ರಾಜ್ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ ಕೇಂದ್ರ ಸರ್ಕಾರ ಘೋಷಿಸಿದ ಈಚಿiಡಿ ಖemuಟಿeಡಿಚಿಣioಟಿ Pಡಿiಛಿe
ಬೆಲೆಗಳಿಗೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ಮೂರು ಕಂತುಗಳಲ್ಲಿ ಹಣ ಪಾವತಿಸಬಹುದು. ಹಾಗೂ ಇದು ಪ್ರಸ್ತುತ. ೨೦೨೧-೨೨ನೇ ಸಾಲಿನಿಂದ ಜಾರಿಗೆ ಬರಬಹುದೆಂದು ತಿಳಿಸಿದೆ. ಇದು ರೈತರ ಹಿತಾಸಕ್ತಿಗೆ ಮಾರಕವಾಗಿದ್ದು, ಕಾರ್ಪೋರೇಟ್ ಕಂಪನಿಗಳ ಪರವಾದ
ಶಿಫಾರಸ್ಸನ್ನು ತಿರಸ್ಕರಿಸಬೇಕೆಂದು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ಹಣದ ಶೇಕಡಾ .೬೦ ರಷ್ಟು ಹಣವನ್ನು ೧೪ ದಿನಗಳೊಳಗೆ ನೀಡುವುದು. ಮೊದಲ ಕಂತು ಪಾವತಿಯಾದ ಒಂದು ತಿಂಗಳೊಳಗೆ ಶೇ. ೨೦% ರಷ್ಟು. ೨ನೇ ಕಂತು ಪಾವತಿಯಾದ ಒಂದು ತಿಂಗಳೊಳಗೆ ಅಥವಾ ಸಕ್ಕರೆ ದಾಸ್ತಾನು ಮಾರಾಟ ವಾದ ನಂತರ ಉಳಿದ ಶೇ. ೨೦ ರಷ್ಟು ಹಣ ಪಾವತಿಸಬಹುದೆಂದು ಸಿಎಸಿಪಿ ಶಿಫಾರಸು ಮಾಡಿದೆ. ಈಗ ಹಾಲಿ ಕಬ್ಬು ನಿಯಂತ್ರಣ ಕಾಯ್ದೆ ೧೯೬೬ರ ಪ್ರಕಾರ ಕಬ್ಬು ಖರೀದಿ ಮಾಡಿದ ೧೪ ದಿನಗಳೊಳಗೆ ಸಂಪೂರ್ಣ ಹಣ ಪಾವತಿಸಬೇಕು. ಇಲ್ಲವಾದರೆ ಶೇ. ೧೫% ರಷ್ಟು ಬಡ್ಡಿ ಸೇರಿಸಿ ಹಣ ನೀಡಬೇಕೆಂಬ ನಿಯಮವಿದೆ. ಈ ನಿಯಮವನ್ನು ಗಾಳಿಗೆ ತೂರಿ ಕಾಯಿದೆಯನ್ನು ಮೊಟಕುಗೊಳಿಸಿ ರೈತರ ಅವನತಿಗೆ ಕಾರಣವಾಗಿದೆ. ಸಹಕಾರ ಸಂಘಗಳಲ್ಲಿ ರೈತರು ಪಡೆದ ಬೆಳೆ ಸಾಲವನ್ನು ೧೨ ತಿಂಗಳೊಳಗೆ ಮರು ಪಾವತಿಸಿದರೆ ಬಡ್ಡಿಯ ರಿಯಾಯಿತಿ ಇರುತ್ತದೆ. ಸಿಎಸಿಪಿ ಯಂತೆ ಹಣ ಪಾವತಿ ವಿಳಂಬವಾದರೆ ರೈತರಿಗೆ ಬಡ್ಡಿ ರಹಿತ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಹಣಕ್ಕಾಗಿ ಕನಿಷ್ಠ ೬ ತಿಂಗಳಾದರು ಬೇಕಾಗುತ್ತದೆ. ಮೊದಲ ಕಂತಿನ ಹಣ ಕಟಾವು ವೆಚ್ಚ ಸಾಗಾಣಿಕೆ ವೆಚ್ಚ ಇತರ ಖರ್ಚಿಗೆ ಮುಗಿದು ಹೋಗುತ್ತದೆ. ಸಾಲ ಮರುಪಾವತಿಗೆ ಹಾಗೂ ಮುಂದಿನ ಕೃಷಿ ವೆಚ್ಚಕ್ಕೆ ರೈತರ ಬಳಿ ಹಣವಿರುವುದಿಲ್ಲ. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಇತರೆ ಆಳುಕಾಳುಗಳ ವೆಚ್ಚವು ದುಬಾರಿಯಾದ ಕಾರಣ ಒಂದು ಟನ್ ಕಬ್ಬಿಗೆ ರೂ. ೩,೨೦೦ ರಿಂದ ೩,೩೦೦/-ಗಳಷ್ಟು ಖರ್ಚು ಬರುತ್ತದೆ. ಆದರೆ ಒಂದು ಟನ್
ಕಬ್ಬಿಗೆ ಕೇವಲ ರೂ. ೨,೭೫೦/-ರೂಗಳು ಮಾತ್ರ ಬೆಲೆ ನಿಗಧಿಗೊಳಿಸಿ ರೈತರಿಗೆ ವಂಚಿಸುತ್ತಿದ್ದಾರೆ. ಒಂದು ಟನ್ ಕಬ್ಬಿನಲ್ಲಿ ಸಕ್ಕರೆ, ಮೊಲಾಸಸ್, ಎಥನಾಲ್, ಡಿಸ್ಟಿಲರಿ ಹಾಗೂ ಸಹ ವಿದ್ಯುತ್ ಉತ್ಪಾದನೆ, ಬಯೋ ಕಾಂಪೋಸ್ಟ್ ಸ್ಪೆಂಟ್ ವಾಷ್ ಸೇರಿದಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಟನ್ ಕಬ್ಬಿಗೆ ೧೨,೦೦೦-ರೂಗಳಷ್ಟು ಆದಾಯ ಬರುತ್ತದೆಂದು ಕಬ್ಬು ವಿಜ್ಞಾನಿಗಳು ಹೇಳಿರುತ್ತಾರೆ. ಡಾ|| ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ತಗಲುವ ವೆಚ್ಚದ ಜೊತೆಗೆ ಶೇ ೫೦ ರಷ್ಟು ಲಾಭಾಂಶ ಸೇರಿಸಿ ಟನ್ ಕಬ್ಬಿಗೆ ರೂ. ೫,೦೦೦/-ಗಳನ್ನು ನೀಡಬೇಕು ಹಾಗೂ ೧೨ ರಿಂದ ೧೩ ತಿಂಗಳೊಳಗೆ ಕಬ್ಬು ಕಟಾವು ಮಾಡಬೇಕೆಂದು ಒತ್ತಾಯಿಸಿದರು.
ಸಿಎಸಿಪಿ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದನ್ನು ಕೈಬಿಟ್ಟು ತಿರಸ್ಕರಿಸಬೇಕು ದೇಶದಲ್ಲಿ ರೈತರ ಕಬ್ಬಿನ ಬಾಕಿ ಹಣ ೨೩ ಸಾವಿರ ಕೋಟಿ ಹಣವನ್ನು ಪಾವತಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಸಕ್ಕರೆ ಮಾಲೀಕರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್. ಲಿಂಗರಾಜಮೂರ್ತಿ, ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಪ್ರವೀಣ್, ಧ್ರುವ ಕೆ.ಪಿ, ನಾಗೇಗೌಡ, ಪೇಟೆ ಶಿವಣ್ಣ, ಸಿದ್ದರಾಜು ಮರಿಲಿಂಗಯ್ಯ, ಮಹಾದೇವ ಸ್ವಾಮಿ, ಶಿವಕುಮಾರ್, ನಾಗೇಶ್, ಉಪಸ್ಥಿತರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: