December 19, 2024

Bhavana Tv

Its Your Channel

ಭ್ರಷ್ಟಾಚಾರ ನಿರ್ಮೂಲನೆ ಪಣ ತೊಡಲು ಕರೆ

ನರೇಗಲ್: ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಪಣ ತೊಡಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹನಮಂತಪ್ಪ ವೈ. ಮಣ್ಣೋಡ್ಡರ ಕರೆ ನೀಡಿದರು.
ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹದ ಅಂಗವಾಗಿ ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು,
ದುರಾಸೆಯಿಂದ ಮನುಷ್ಯ ಭ್ರಷ್ಟಾಚರಕ್ಕೆ ಇಳಿದು ಸಮಾಜದಲ್ಲಿ ಸಂಘರ್ಷ, ಅಶಾಂತಿ ವಾತಾವರಣ ಸೃಷ್ಟಿ ಮಾಡುತ್ತಾನೆ. ಇದರಿಂದ, ಅಜ್ಞಾನ, ಅನ್ಯಾಯ, ದುಷ್ಕೃತ್ಯಗಳು ಹೆಚ್ಚುತ್ತವೆ. ಅದಕ್ಕಾಗಿ ಎಲ್ಲರೂ ಭ್ರಷ್ಟಾಚಾರ ತಡೆದು ಆತ್ಮಸಾಕ್ಷಿಯಿಂದ ಕೆಲಸ ಮಾಡಲು ಮುಂದಾಗಬೇಕು ಎಂದು ಹೇಳಿದರು.
ರಮೇಶ ವೈ. ಹಲಗಿಯವರ, ರಾಮಚಂದ್ರಪ್ಪ ಎಚ್. ಕಜ್ಜಿ, ಮುತ್ತು ಎಸ್. ಹೂಗಾರ, ಎಂ. ಎಚ್. ಕಾತರಕಿ, ಪಿ. ಜಿ. ರಾಂಪುರ, ಶ್ರೀಕಾಂತ ಪಲ್ಲೇದ, ಉದಯ ಮುದೇನಗುಡಿ, ಪರಶುರಾಮ ನಡುವಲಕೇರಿ ಇದ್ದರು.
ನರೇಗಲ್ ಪಟ್ಟಣ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹದ ಅಂಗವಾಗಿ ಮುಖ್ಯಾಧಿಕಾರಿ ಹನಮಂತಪ್ಪ ವೈ. ಮಣ್ಣೋಡ್ಡರ ಪ್ರತಿಜ್ಞಾವಿಧಿ ಬೋಧಿಸಿದರು

ವರದಿ ವೀರಣ್ಣ ಸಂಗಳದ

error: