December 21, 2024

Bhavana Tv

Its Your Channel

ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಮಾದರಿ ಮುಕ್ತ ರಸ ಪ್ರಶ್ನೆ ಸ್ಪರ್ಧೆ.

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಕರ್ನಾಟಕ ಪ್ರೇಸ್ ಕ್ಲಬ್, ನೂತನ ಕನ್ನಡ ಸಂಘ, ಶ್ರೀ ಪಾಂಡುರAಗ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಸತ್ಯಶೋಧಕ ಗ್ರಾಮೀಣ ಶಿಕ್ಷಣಾಭಿವೃದ್ದಿ ಸಂಘ, ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಸಾವಳಗಿ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ರಾಜ್ಯ ಮಟ್ಟದ ಮಾದರಿ ಮುಕ್ತ ರಸಪ್ರಶ್ನೆ ಸ್ಪರ್ಧೆ ನವೆಂಬರ್ ೦೧ ರಂದು ಹಮ್ಮಿಕೊಳ್ಳಲಾಗಿದೆ ಎಂದು ನೂತನ ಕನ್ನಡ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಎಸ ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಶರಣಯ್ಯಾ ಭಂಡಾರಿಮಠ, ಸತೀಶ ಬೆನಕಟ್ಟಿ, ಉದ್ಘಾಟಕರಾಗಿ ಜಮಖಂಡಿ ಉಪವಿಭಾಗಾಧಿಕಾರಿಗಳಾದ ಸಿದ್ದು ಹುಲ್ಲೂಳ್ಳಿ ಹಾಗೂ ತಹಶಿಲ್ದಾರ ಪ್ರಶಾಂತ ಚನಗೂಂಡ ಅಧ್ಯಕ್ಷತೆ ಜಮಖಂಡಿಯ ಶಾಸಕರಾದ ಆನಂದ ನ್ಯಾಮಗೌಡ ಹಾಗೂ ಮಾಜಿ ಶಾಸಕರಾದ ಶ್ರಿಕಾಂತ ಕುಲಕರ್ಣಿಯವರು ನಾಡೋಜ ಶ್ರೀ ಜಗದೀಶ್ ಗುಡಗುಂಟಿ ಸೇರಿದಂತೆ ಅನೇಕ ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.

ವರದಿ : ಕಿರಣ ಸೂರಗೂಂಡ ಸಾವಳಗಿ

error: