December 22, 2024

Bhavana Tv

Its Your Channel

ದೀಪಾವಳಿ ಬಲಿ ಪಾಡ್ಯದಂದು ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಗೋ ಪೂಜೆ

ಮಳವಳ್ಳಿ : ಮಳವಳ್ಳಿ ಪಟ್ಟಣದ ಶ್ರೀಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ದೀಪಾವಳಿ ಬಲಿ ಪಾಡ್ಯ ದಿನದಂದು ದೇವಾಲಯದಲ್ಲಿ ತಾಲ್ಲೂಕು ಆಡಳಿತವತಿಯಿಂದ ಗೋ ಪೂಜೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರು ಗೋ ಫೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬದುಕಿನುದ್ದಕ್ಕೂ ಹಾಲು ಗಂಜಲ ಗೊಬ್ಬರ ನೀಡುವ ಗೋಮಾತೆ ಬದುಕಿನ ನಂತರವೂ ತನ್ನ ದೇಹ ಚರ್ಮವನ್ನು ಮಾನವ ಉಪಯೋಗಕ್ಕೆ ಬಿಟ್ಟು ಹೋಗುವ ಮೂಲಕ ಮನುಷ್ಯರಿಗೆ ನಿಜವಾದ ಕಾಮದೇನು ಎಂದು ಬಣ್ಣಿಸಿದರು.
ಗೋವುಯನ್ನು ದೇವರರಂತೆ ನಾವು ಕಾಣಬೇಕು ಅದನ್ನು ಪೂಜೆ ಮಾಡಲು ಅವಕಾಶ ಕಲ್ಪಿಸಿದ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಜಯಣ್ಣ , ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹನುಮಂತ ,ಪಶು ಸಂಗೋಪನೆ ಇಲಾಖೆ ಅಧಿಕಾರಿ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: