ಸಾವಳಗಿ: ಸರ್ಕಾರ ದಲಿತ ಸಮುದಾಯಗಳ ಕಲ್ಯಾಣಕ್ಕಾಗಿ ಸಾವಿರಾರು ಕೋಟಿಗಳನ್ನು ಮೀಸಲಿಟ್ಟು ನಾನಾ ರೀತಿಯ ಯೋಜನೆಗಳನ್ನು ಸಿದ್ದಪಡಿಸಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕಾಲೋನಿಗಳ ಮೂಲಭೂತ ಸೌಕರ್ಯಗಳ ಸಮಸ್ಯೆಯಾಗದಂತೆ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದರು ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಲಿತರಿಗೆ ಸರಿಯಾಗಿ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ.
ಗ್ರಾಮದ ದಲಿತ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಭಜಂತ್ರಿ ಗಲ್ಲಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುವದಕ್ಕಿಂತ ದುರಸ್ಥಿಯಲ್ಲಿ ಇದ್ದದೇ ಹೆಚ್ಚು. ಭಜಂತ್ರಿ ಗಲ್ಲಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ದಿ.ಸಿದ್ದು ನ್ಯಾಮಗೌಡ ಅವರು ಹೇಳಿದ ಪ್ರಕಾರ ಹೈಟೇಕ ಘಟಕ ಸ್ಥಾಪನೆಯಾಗುತ್ತೆ ಎಂದಿದ್ದರು. ಆದರೆ ಕಟ್ಟಡ ಪ್ರಾರಾಂಭವಾದಾಗಿನಿAದ ಎಲ್ಲವೂ ಕಳಪೆ ಮಟ್ಟದಾಗಿರುತ್ತದೆ.
ಇದರ ಬಗ್ಗೆ ಅನೇಕ ಬಾರಿ ನಾನಾ ಪತ್ರಕೆಗಳಲ್ಲಿವರದಿಯಾಗಿದ್ದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಸಮಸ್ಯೆ ಬಗೆ ಹರಿಸುವದಕ್ಕಿಂತ ಸುದ್ಧಿ ಮಾಡಿದ ಪತ್ರಕರ್ತರಿಗೆ ಸ್ಥಳೀಯ ನಾಯಕರುಗಳಿಂದ ಕರೆ ಮಾಡಿಸಿದ್ದೆ ಹೆಚ್ಚು ಎಂದು ಸ್ಥಳೀಯ ನಿವಾಸಿಗಳು ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕ ಅಧ್ಯಕ್ಷರಾದ ಸಿದ್ದು ಬಂಡಿವಡ್ಡರ ಆರೋಪಿಸಿದ್ದಾರೆ.
ಸರ್ಕಾರ ಖಾಸಗಿ ಏಜೆನ್ಸಿಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಅವಕಾಶ ನೀಡಿದ್ದು, ಪ್ರತಿ ಘಟಕಗಳ ನಿರ್ಮಾಣ ವೆಚ್ಚ ೮ ರಿಂದ ೧೨ ಲಕ್ಷ ರೂ ಅನುದಾನವನ್ನು ಸರ್ಕಾರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಮೂಲಕ ಪಾವತಿ ಮಾಡಿರುತ್ತಾರೆ. ಘಟಕಗಳ ನಿರ್ಮಾಣದ ನಂತರ ೫ ವರ್ಷಗಳವರೆಗೆ ಆಯಾ ಏಜೆನ್ಸಿಗಳ ನಿರ್ವಹಣೆ, ದುರಸ್ತಿ ಮಾಡುವಂತೆ ಖರಾರು ಆಗಿರುತ್ತದೆ. ಆದರೆ ಸಾವಳಗಿಯಲ್ಲಿರುವ ಸದರಿ ಘಟಕಗಳನ್ನು ಎಷ್ಟು ಬಾರಿ ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಬೇಕಾಗಿದೆ.
ಅಧಿಕಾರಿಗಳು ಏಜೆನ್ಸಿಗಳೊಂದಿಗೆ ಹೊಂದಾಣಿಕೆಯಾಗಿ ಉದ್ದೇಶ ಪೂರ್ವಕವಾಗಿ ದಲಿತ ಕಾಲೋನಿಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿರುವದಿಲ್ಲವೆAದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಹಾಲಿ ಶಾಸಕರಾದ ಆನಂದ ನ್ಯಾಮಗೌಡ ಇಲಾಖಾ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ದುರಸ್ತಿ ಮಾಡುವಂತೆ ತಿಳಿಸಿದ್ದರು. ಆ ಸಂಧರ್ಭದಲ್ಲಿ ದುರಸ್ತಿ ಮಾಡಿಸಿ ಕೇವಲ ೧೫ ದಿನಗಳ ಪ್ರಾರಂಭಗೊAಡ ಘಟಕಗಳು ಮತ್ತೆ ದುರಸ್ತಿಯತ್ತ ಮುಖಮಾಡಿ ತುಕ್ಕು ಹಿಡಿಯುತ್ತಿದ್ದಾವೆ. ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರು ಯಾವುದೇ ಪ್ರಯೋಜನಾವಾಗಿಲ್ಲ, ಏಜೆನ್ಸಿಯವರು ಹಾಗೂ ಅಧಿಕಾರಿಗಳು ದಲಿತರಿಗೆ ಹಾಗೂ ಸರ್ಕಾರದ ಕಣ್ಣಿಗೆ ಮಣ್ಣು ಎರಚಿ ಸಾರ್ವಜನಿಕರ ತೆರಿಗೆ ದುಡ್ಡನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಸಂಬoಧಪಟ್ಟ ಇಲಾಖೆಯವರು ಒಂದು ವಾರದಲ್ಲಿ ಘಟಕಗಳನ್ನು ಪ್ರಾರಂಭಿಸದಿದ್ದರೆ ಸಾವಳಗಿ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಎಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹಾಗೂ ಅಧಿಕಾರಿಗಳನ್ನು ಅಮಾನತ್ತು ಗೋಳಿಸುವಂತೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಸಾಗರ ಕಾಂಬಳೆ, ಅಮೀತ ಸೂರಗೊಂಡ ಸತೀಶ ತೀಕೋಟಾ, ಕಿರಣ ಸೂರಗೊಂಡ ಪ್ರವೀಣ ಮೇಲಿನಕೇರಿ, ರಾಜು ಬಂಡಿವಡ್ಡರ, ರಾಜು ಭಜಂತ್ರಿ, ವಿಠ್ಠಲ ಭಜಂತ್ರಿ, ಪರಶು ಭಜಂತ್ರಿ ಉಪಸ್ಥಿತರಿದ್ದರು.
ವರದಿ ಕಿರಣ ಸೂರಗೂಂಡ ಸಾವಳಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ