December 21, 2024

Bhavana Tv

Its Your Channel

ಮಳೆಯಿಂದ ಗದ್ದೆಯಂತಾದ ಸಾವಳಗಿ-ತುಬಚಿ ರಸ್ತೆ

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಪಟ್ಟಣದಲ್ಲಿ ಮಳೆಯಾದ್ರೆ ಕೆಲವೂಂದು ರಸ್ತೆಗಳು ಗದ್ದೆಯಂತಾಗುತ್ತವೆ ಹೌದು ಇದು ಸಾವಳಗಿ-ತುಬಚಿ ಮುಖ್ಯ ರಸ್ತೆಯ ದುಸ್ಥಿತಿ ಈ ರಸ್ತೆ ಮುಖಾಂತರ ಸಾವಳಗಿಯ ತೋಟದ ವಸ್ತಿಗಳಿಗೆ ಹಾಗೂ ತುಬಚಿ,ಶೂರ್ಪಾಲಿ ಗ್ರಾಮದ ಜನರು ಈ ರಸ್ತೆಯನ್ನೆ ಅವಲಂಬಿಸಿದ್ದಾರೆ. ಇಲ್ಲಿ ದಿನಾಲು ಶಾಲಾ ಕಾಲೇಜು ಮಕ್ಕಳು,ವಯೋವೃದ್ದರು, ಕೊಳಚೆ ನೀರು ಸಿಡಿಯುತ್ತೆ ಎನ್ನುವ ಭಯದಲ್ಲಿ ಓಡಾಡುತ್ತಾರೆ, ಈಗಾಗಲೇ ಈ ರಸ್ತೆಯನ್ನು ಬಾಗಲಕೋಟ ಸಂಸದರಾದ ಪಿ ಸಿ ಗದ್ದಿಗೌಡರ ಉದ್ಘಾಟನೆ ಮಾಡಿದ್ದು ಅದು ತುಬಚಿಯಿಂದ-ಸಾವಳಗಿ ಪಟ್ಟಣದವರೆಗೆ ಅಂತಾ ನಾಮಫಲಕದಲ್ಲಿ ಇದ್ದು ಗುತ್ತಿಗೆದಾರರು ಕೆಲಸ ಮಾತ್ರ ಸಾವಳಗಿ ಗ್ರಾಮದಿಂದ ಎರಡು ಕಿ ಮೀ ಅಂತರದಲ್ಲಿ ಪ್ರಾರಂಭಿಸಿದ್ದಾರೆ. ಸಾರ್ವಜನಿಕರು ಪ್ರತಿಭಟನೆ ಮಾಡುವ ಮುನ್ನ ಅಥವಾ ಎನಾದರು ಅನಾಹುತ ಸಂಭAವಿಸುವ ಮುಂಚೆ ಎಚ್ಚೆತುಕೂಂಡು ಸಂಭAದಿಸಿದ ಅಧಿಕಾರಿಗಳು ಗದ್ದೆಯಂತಾದ ರಸ್ತೆಯನ್ನು ಸರಿಪಡಿಸಲ್ಲಿ ಎಂದು ಪ್ರಜ್ಞಾವಂತರ ಆಗ್ರಹವಾಗಿದೆ.

ವರದಿ ಕಿರಣ ಸೂರಗೂಂಡ ಸಾವಳಗಿ

error: