May 6, 2024

Bhavana Tv

Its Your Channel

ಸಮಾಜದಲ್ಲಿನ ಕನಿಷ್ಠ ಮಟ್ಟದ ವ್ಯಕ್ತಿಗೆ ಸಾಹಿತ್ಯದ ಪರಿಕಲ್ಪನೆ ಬೆಳೆಸುವ ಗುರಿ: ನೂತನ ಕಸಾಪ ಜಿಲ್ಲಾದ್ಯಕ್ಷ ಕೋಡಿರಂಗಪ್ಪ

ಬಾಗೇಪಲ್ಲಿ:- ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯಾಭಿಮಾನಿಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಕೋಡಿರಂಗಪ್ಪ ಅವರಿಗೆ ಕೃತಜ್ಞತಾ ಸಮಾರಂಭ ಹಾಗೂ ಅಭಿನಂದನಾ ಸಮಾರಂಭ ಶನಿವಾರ ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕೋಡಿರಂಗಪ್ಪ ಮಾತನಾಡಿ, ಸಾಹಿತ್ಯದ ನೆಲೆಯಲ್ಲಿ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಮಾಡುವ ಕಾರ್ಯವು ನಿರಂತರವಾಗಿ ನಡೆಯುವಂತೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಸಮಾಜದಲ್ಲಿನ ಕನಿಷ್ಠ ಮಟ್ಟದ ವ್ಯಕ್ತಿಗೆ ಸಾಹಿತ್ಯದ ಪರಿಕಲ್ಪನೆ ಬೆಳೆಸುವ ಗುರಿ ಎಲ್ಲರದ್ದಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ
ಅವಿರತವಾಗಿ ಶ್ರಮಿಸುವ ಮೂಲಕ ಇಡೀ ಜಿಲ್ಲೆಯಾದ್ಯಂತ ಸಾಹಿತ್ಯದ ಕಂಪನ್ನು ಬೆಳೆಸುವಂತೆ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಭವನಗಳನ್ನು ನಿರ್ಮಿಸಲಾಗುವುದು. ವರ್ಷಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುತ್ತೇನೆ. ಬ್ಯಾಂಕಿAಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕಿದೆ. ಈ ಬಗ್ಗೆ
ಧ್ವನಿಯೆತ್ತಿ, ಹೋರಾಟ ನಡೆಸಲಾಗುವುದು. ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಅನುಷ್ಠಾನಗೊಳ್ಳಬೇಕಿದೆ ಎಂದು ಹೇಳಿದರು.

ಬಾಗೇಪಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್ ಮಾತನಾಡಿ, ಜಿಲ್ಲೆಯ ಸಾಹಿತ್ಯ ಪರಿಷತ್ತಿಗೆ ಕೋಡಿರಂಗಪ್ಪ ಸಾರಥ್ಯ ವಹಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ಗೌರವ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು, ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಡಾ.ಕೋಡಿರಂಗಪ್ಪ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಆರ್.ಕೃಷ್ಣ, ನಿವೃತ್ತ ಪ್ರಾಧ್ಯಾಪಕ ಎ.ಕೆ.ನಿಂಗಪ್ಪ,ರಾಮಯ್ಯ, ನ್ಯಾಷನಲ್ ಕಾಲೇಜಿನ ಪದವಿ ಪ್ರಾಂಶುಪಾಲರಾದ ಕೆ. ಪಿ.ನಾರಾಯಣಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಟಿ. ವೀರಾಂಜನೇಯ, ಪ್ರಜಾ ವೈದ್ಯ ಅನಿಲ್ ಕುಮಾರ್ ಅವುಲಪ್ಪ, ಉಪನ್ಯಾಸಕ ಉಮೇಶ್ ಬಾವಿಕಟ್ಟಿ,ಮುನಿ ರಾಮಯ್ಯ, ಸರ್ಕಾರಿ ನೌಕರರ ಸಂಘದ ಗೌರಾವಾಧ್ಯಕ್ಷ ಆರ್ ಹನುಮಂತ ರೆಡ್ಡಿ, ಚಿನ್ನ ಕೈವಾರಮಯ್ಯ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: