
ಭಟ್ಕಳ ನಗರದ ಜಾಲಿ ರಸ್ತೆಯಲ್ಲಿರುವ ಲೈಫ್ ಕೇರ್ ಆಸ್ಪತ್ರೆ ಹಾಗೂ ಭಟ್ಕಳ ಸಿಟಿ ಜೆ.ಸಿ.ಐ. ಇವುಗಳ ಸಹಯೋಗದೊಂದಿಗೆ ಡಿ.೧೬ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಲ್ಲಿನ ರಾಬಿತಾ ಸೊಸೈಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಸಲ್ಮಾನ್ ಅವರು ಹೇಳಿದರು.
ಅವರು ಇಲ್ಲಿನ ಲೈಪ್ ಕೇರ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಉಚಿತ ಆರೋಗ್ಯ ಶಿಬಿರದ ಕುರಿತು ಮಾಹಿತಿಯನ್ನು ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಯಾಸೀನ್ ಸೌದಾಗರ್ ಅವರು ಅಂದು ನುರಿತ ವೈದ್ಯರುಗಳಿಂದ ಉಚಿತ ತಪಾಸಣೆ, ವೈದ್ಯರು ಶಿಫಾರಸ್ಸು ಮಾಡಿದ ಪರೀಕ್ಷೆಗಳನ್ನು ಕೂಡಾ ಉಚಿತವಾಗಿ ಮಾಡಲಾಗುವುದು ಎಂದರು. ಅಲ್ಲದೇ ಕ್ಯಾಂಪ್ನಲ್ಲಿ ಭಾಗವಹಿಸಿದವರಿಗೆ ಒಂದು ವಾರದೊಳಗಾಗಿ ತಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ಬಂದರೆ ಶೇ.೧೫ರ ರಿಯಾಯಿತಿ ಕೂಡಾ ಲಭ್ಯವಿದೆ ಎಂದರು.
ಉಚಿತ ತಪಾಸಣಾ ಶಿಬಿರದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಯೂರಿಮಕ್ ಎಸಿಡ್, ಇ.ಸಿ.ಜಿ., ಎಚ್-ಫೈಲೋರಿ ಟೆಸ್ಟ್, ಲಿಪಿಡ್ ಪ್ರೊಫೈಲ್, ರಕ್ತದಲ್ಲಿನ ಗ್ಲೂಕೊಸ್, ಇತ್ಯಾದಿ ಪರೀಕ್ಷೆಗಳನ್ನು ಮಾಡಲಾಗುವುದು. ಶ್ವಾಸಕೋಶದ ಪರೀಕ್ಷೆ ಕೂಡಾ ಮಾಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗಾಗಿ ೮೩೮೫೯೯೨೨೩೩ಗೆ ಸಂಪರ್ಕಿಸಬಹುದು ಎಂದೂ ತಿಳಿಸಲಾಗಿದೆ.
ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳ ವೈದ್ಯರು, ಮಧುಮೇಹಿ ತಜ್ಞ ವೈದ್ಯರು, ಮೂಳೆ ತಜ್ಞರು, ಮಕ್ಕಳ ತಜ್ಞರು, ಓರಲ್ ಮ್ಯಾಕ್ಸಿಲೋ ಫೇಶಿಯಲ್ ಸರ್ಜನ್ (ಹಲ್ಲು), ಮಾಸ್ಟರ್ ಫಿಜಿಯೋಥೆರಪಿಸ್ಟ್ ವ್ಯದ್ಯರು ಲಭ್ಯರಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದೂ ಅವರು ತಿಳಿಸಿದರು.
ಭಟ್ಕಳ ಸಿಟಿ ಜೆ.ಸಿ.ಐ. ಅಧ್ಯಕ್ಷ ಪಾಂಡುರoಗ ನಾಯ್ಕ ಮಾತನಾಡಿ ತಮ್ಮ ಜೇಸಿ ಸಂಸ್ಥೆ ಸಾಮಾಜಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.
ಜೇಸಿ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ